| ಅತಿವೇಗದ ಚಾಲನೆ: ಸಂಚಾರಿ ನಿಯಮ ಉಲ್ಲಂಘಿಸಿದ ರೋಹಿತ್ ಶರ್ಮಾಗೆ ದಂಡ ಪುಣೆ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ, ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಲಯದಲ್ಲಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿಗಳ ನಿದ್ದೆಗೆಡಿಸುತ್ತಿರುವ ಅವರು, ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅತಿವೇಗವಾಗಿ ಕಾರು ಚಾಲನೆ ಮಾಡಿ ವಿವಾದಕ್ಕೊಳಗಾಗಿದ್ದಾರೆ ಎಂದು 'ಪುಣೆ ಟೈಮ್ಸ್‌ ಮಿರರ್‌' ವರದಿ ಮಾಡಿದೆ. ರೋಹಿತ್‌ ತಮ್ಮ ಲ್ಯಾಂಬೋರ್ಗಿನಿ ಕಾರನ್ನು ಪ್ರತಿ ಗಂಟೆಗೆ 215 ಕಿ.ಮೀ ವೇಗದಲ್ಲಿ ಚಲಾಯಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕಾಗಿ ಅವರಿಗೆ ದಂಡದ ಮೂರು ರಶೀದಿಗಳನ್ನು ಆನ್‌ಲೈನ್‌ ಮೂಲಕ ಪೊಲೀಸರು ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ನಿರ್ದಿಷ್ಠವಾಗಿ ಯಾವ ದಿನ ರೋಹಿತ್‌ ಕಾರು ಚಲಾಯಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅಕ್ಟೋಬರ್‌ 14ರಂದು ಅಹಮದಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಎದುರಿನ ಪಂದ್ಯದ ಬಳಿಕ ಭಾರತ ತಂಡ, ಭಾನುವಾರವೇ ಪುಣೆಗೆ ಬಂದಿಳಿದಿದೆ. ಸೋಮವಾರ ವಿಶ್ರಾಂತಿ ದಿನವಾಗಿದ್ದರಿಂದ ರೋಹಿತ್ ಅವರು ಬಹುಶಃ ಕುಟುಂಬದೊಂದಿಗೆ ಸಮಯ ಕಳೆಯಲು ಮುಂಬೈನಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಲಾಗಿದೆ. ಟಿಂ ಇಂಡಿಯಾ ಮಂಗಳವಾರದಿಂದ ಅಭ್ಯಾಸ ನಡೆಸುತ್ತಿದೆ. ಇಂದು (ಗುರುವಾರ, ಅಕ್ಟೋಬರ್ 19) ಬಾಂಗ್ಲಾದೇಶದ ವಿರುದ್ಧ ಪುಣೆಯಲ್ಲಿ ಪಂದ್ಯ ನಡೆಯಲಿದೆ. ನೆಟ್ಟಿಗರ ಕಳವಳ, ಟೀಕೆ ರೋಹಿತ್ ಶರ್ಮಾ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ಕಳವಳ ವ್ಯಕ್ತವಾಗಿದೆ. ವಿಶ್ವಕಪ್‌ನಂತಹ ಪ್ರಮುಖ ಟೂರ್ನಿ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ಎಚ್ಚರಿಕೆಯಿಂದ ಇರಬೇಕು ಎಂದು ಕೆಲವರು ಕಿವಿಮಾತು ಹೇಳಿದ್ದಾರೆ. 'ಇಷ್ಟು ವೇಗದಲ್ಲಿ ವಾಹನ ಚಲಾಯಿಸಿ ನಿಮಗಷ್ಟೇ ಅಲ್ಲದೆ, ನಿಮ್ಮ ಕುಟುಂಬದವರಿಗೂ, ಸುತ್ತಲಿನವರಿಗೂ ಅನಗತ್ಯ ತೊಂದರೆ ನೀಡುವುದೇಕೆ? ಜನಪ್ರಿಯ ವ್ಯಕ್ತಿಯಾಗಿ ಸಾರ್ವಜನಿಕರಿಗೆ ಮಾದರಿಯಾಗಿರಿ' ಎಂದು ನೆಟ್ಟಿಗರೊಬ್ಬರು ಕಿವಿ ಹಿಂಡಿದ್ದಾರೆ. ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ (ಆಸ್ಟ್ರೇಲಿಯಾ ವಿರುದ್ಧ) ಖಾತೆ ತೆರೆಯಲು ವಿಫಲವಾಗಿದ್ದ ರೋಹಿತ್‌, ಎರಡನೇ ಪಂದ್ಯದಲ್ಲಿ (ಅಫ್ಗಾನಿಸ್ತಾನ ವಿರುದ್ಧ) ಅಮೋಘ ಶತಕ ಬಾರಿಸಿದ್ದರು. ಆ ಮೂಲಕ ಅವರು ವಿಶ್ವಕಪ್‌ ಟೂರ್ನಿಗಳಲ್ಲಿ ಹೆಚ್ಚು (7) ಶತಕ ಸಿಡಿಸಿದ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ. ಸಾಂಪ್ರದಾಯಿ ಎದುರಾಳಿ ಪಾಕ್‌ ವಿರುದ್ಧದ ಮೂರನೇ ಪಂದ್ಯದಲ್ಲಿಯೂ ಗುಡುಗಿದ್ದ ಅವರು, ಟೀಂ ಇಂಡಿಯಾದ ಜಯವನ್ನು ಸುಲಭವಾಗಿಸಿದ್ದರು. 3 - . 200kmph . ( ). ../52ghlg7b3m ?.. . ://./v5jnpFqrXb . 😒 # ##RohitSharma𓃵 : . 200 / 215 / . , ' . ' … ../h8lbQxHuUx , - 😳# # # # # # ../qTW3x36Xoi ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.