: ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಹಲವು ದಾಖಲೆ ಬರೆದ ಕಿಂಗ್ ಕೊಹ್ಲಿ ಪುಣೆ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅನೇಕ ಸ್ಮರಣೀಯ ದಾಖಲೆಗಳನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 48ನೇ ಶತಕದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿರುವ ವಿರಾಟ್, ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸರದಾರರು: 34,357 - ಸಚಿನ್ ತೆಂಡೂಲ್ಕರ್ 28,016 - ಕುಮಾರ ಸಂಗಕ್ಕರ 27,483 - ರಿಕಿ ಪಾಂಟಿಂಗ್ 25,958* - ವಿರಾಟ್ ಕೊಹ್ಲಿ 25,957 - ಮಹೇಲಾ ಜಯವರ್ಧನೆ ವಿರಾಟ್ ಕೊಹ್ಲಿ (ಪಿಟಿಐ ಚಿತ್ರ) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್, ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 50+ ಸಾಧನೆ: ಸಚಿನ್ ತೆಂಡೂಲ್ಕರ್: 264 ರಿಕಿ ಪಾಂಟಿಂಗ್: 217 ಕುಮಾರ ಸಂಗಕ್ಕರ: 216 ವಿರಾಟ್ ಕೊಹ್ಲಿ: 212 ಜ್ಯಾಕ್ ಕಾಲಿಸ್: 211 ಏಕದಿನ ವಿಶ್ವಕಪ್‌‌ನಲ್ಲಿ ಗರಿಷ್ಠ ರನ್ ಸರದಾರರು: ಇನ್ನು ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲೂ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ಸಾಧನೆಯನ್ನು ವಿರಾಟ್ ಹಾಗೂ ರೋಹಿತ್ ಶರ್ಮಾ ಇದೇ ಪಂದ್ಯದಲ್ಲಿ ಹಿಮ್ಮೆಟ್ಟಿಸಿದ್ದಾರೆ. ಏಕದಿನ ವಿಶ್ವಕಪ್‌‌ನಲ್ಲಿ ಗರಿಷ್ಠ ರನ್ ಸರದಾರರು: ಸಚಿನ್ ತೆಂಡೂಲ್ಕರ್: 2,278 ರಿಕಿ ಪಾಂಟಿಂಗ್: 1,743 ಕುಮಾರ ಸಂಗಕ್ಕರ: 1,532 ವಿರಾಟ್ ಕೊಹ್ಲಿ: 1,248* ರೋಹಿತ್ ಶರ್ಮಾ: 1,243 ಬ್ರಿಯಾನ್ ಲಾರಾ: 1,225 ಎಬಿಡಿ ವಿಲಿಯರ್ಸ್: 1,207 ಅಂಕಿಅಂಶ ಕೃಪೆ: ಕ್ರಿಕ್‌ಇನ್ಫೋ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.