| ವಾರ್ನರ್‌ ಮಿಂಚು: ದಾಖಲೆಗಳ ವಿಕ್ರಮಕ್ಕೆ ಬೆಂಗಳೂರು ಸಾಕ್ಷಿ ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು ನಿನ್ನೆ (ಅ.20) ನಡೆದ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಹಲವು ದಾಖಲೆಗಳನ್ನು ಬರೆದರು. ಕಾಂಗರೂ ನಾಡಿನ ಬ್ಯಾಟರ್ ಡೇವಿಡ್‌ ವಾರ್ನರ್‌ ಅವರ ಬ್ಯಾಟ್‌ನಿಂದ ಹಲವು ದಾಖಲೆಗಳು ಹರಿದು ಬಂದವು. ಇದಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ವಾರ್ನರ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಪರಿಣಾಮ ಆಸ್ಟ್ರೇಲಿಯಾ 62 ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತು. ವಾರ್ನರ್‌ ಹಾಗೂ ಮಿಚೆಲ್ ಮಾರ್ಷ್‌ ಜೋಡಿ ಮೊದಲ ವಿಕೆಟ್‌ಗೆ 259 ರನ್‌ ಕಲೆಹಾಕಿತು. ಇದು ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಬಂದ ದಾಖಲೆಯ ಜೊತೆಯಾಟ ಎನಿಸಿತು. ಪಾಕಿಸ್ತಾನ ವಿರುದ್ಧ ಸತತ 4ನೇ ಶತಕ ದಾಖಲಿಸಿದರು. 2023ರ ವಿಶ್ವಕಪ್‌ನಲ್ಲಿ ವಾರ್ನರ್‌ ವೈಯಕ್ತಿಗ ಗರಿಷ್ಠ ಮೊತ್ತ ದಾಖಲಿಸಿದರು (ಇಂದಿನವರೆಗೂ ಅ.21) ವಿಶ್ವಕಪ್‌ ಟೂರ್ನಿಗಳಲ್ಲಿ ವಾರ್ನರ್‌ ಒಟ್ಟು 5 ಶತಕ ಬಾರಿಸಿದ್ದಾರೆ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪಾಕ್‌ ವಿರುದ್ಧ 19 ಸಿಕ್ಸ್‌ ಹೊಡೆದ ದಾಖಲೆ ಬರೆಯಿತು. ಇವುಗಳಲ್ಲಿ ವಾರ್ನರ್‌ 9 ಸಿಕ್ಸ್‌ ಬಾರಿಸಿದ್ದಾರೆ. ಏಕ ದಿನ ಪಂದ್ಯಗಳಲ್ಲಿ 7ನೇ ಬಾರಿ 150ಕ್ಕಿಂತ ಹೆಚ್ಚು ರನ್‌ ಗಳಿಸಿದ ಸಾಧನೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.