: | ಕಳಚಿತು ಪಾಕ್‌ನ ಸೋಲಿನ ಸರಪಳಿ, 7 ವಿಕೆಟ್ ಜಯ ಕೋಲ್ಕತ್ತ: ಶಹೀನ್ ಶಾ ಅಫ್ರಿದಿ ಅಮೋಘ ಬೌಲಿಂಗ್ ಮತ್ತು ಫಕಾರ್ ಜಮಾನ್ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಜಯಿಸಿತು. ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಎದುರು 7 ವಿಕೆಟ್‌ಗಳಿಂದ ಸೋತ ಬಾಂಗ್ಲಾದೇಶ ತಂಡವು ಸೆಮಿಫೈನಲ್ ಹಾದಿಯಿಂದ ಹೊರಬಿತ್ತು. ಪಾಕ್ ತಂಡಕ್ಕೆ ಇನ್ನೂ ಸಣ್ಣ ಅವಕಾಶವೊಂದು ಇದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಟೂರ್ನಿಯಲ್ಲಿ ಒಟ್ಟು ಏಳು ಪಂದ್ಯ ಆಡಿದೆ. ಮೊದಲ ಎರಡರಲ್ಲಿ ಜಯಿಸಿತ್ತು. ನಂತರ ನಾಲ್ಕರಲ್ಲಿ ಸತತ ಸೋಲು ಅನುಭವಿಸಿತ್ತು. ಇದೀಗ ಸೋಲಿನ ಸರಪಳಿ ತುಂಡಾಗಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ ವೇಗಿ ಅಫ್ರಿದಿ (23ಕ್ಕೆ3) ಮತ್ತು ಮೊಹಮ್ಮದ್ ವಾಸೀಂ ಜೂನಿಯರ್ (31ಕ್ಕೆ3) ಅವರ ಬೌಲಿಂಗ್ ಮುಂದೆ ಬಾಂಗ್ಲಾ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಲಿಟನ್ ದಾಸ್ (45 ರನ್), ಮಧ್ಯಮಕ್ರಮಾಂಕದಲ್ಲಿ ಮೆಹಮುದುಲ್ಲಾ (56; 70ಎ) ಹಾಗೂ ನಾಯಕ ಶಕೀಬ್ ಅಲ್ ಹಸನ್ (43; 64ಎ) ಅವರ ಬ್ಯಾಟಿಂಗ್‌ನಿಂದಾಗಿ 45.1 ಓವರ್‌ಗಳಲ್ಲಿ 204 ರನ್ ಗಳಿಸಿತು. ಇದಕ್ಕುತ್ತರವಾಗಿ ಪಾಕ್ ತಂಡವು 32.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 205 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡಕ್ಕೆ ಅಬ್ದುಲ್ಲಾ ಶಫೀಕ್ (68; 69ಎ, 4X9, 6X2) ಮತ್ತು ಜಮಾನ್ (81; 74ಎ, 4X3, 6X7) ಮೊದಲ ವಿಕೆಟ್ ಜೊತೆಯಾಟದಲ್ಲಿ 128 ರನ್‌ ಸೇರಿಸಿದರು. ನಂತರ 41 ರನ್‌ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತುಸು ಆತಂಕ ಎದುರಿಸಿತ್ತು. ಈ ಮೂರು ವಿಕೆಟ್‌ಳನ್ನೂ ಬಾಂಗ್ಲಾ ತಂಡದ ಆಫ್‌ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಗಳಿಸಿದರು. ಪಾಕ್ ಆಟಗಾರ ಶಫೀಕ್ ಅವರು ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಗಳಿಸಿದರು. ಇದರೊಂದಿಗೆ ಮಿಸ್ಬಾ ಉಲ್ ಹಕ್ ಹಾಗೂ ಬಾಬರ್ ಆಜಂ ಅವರ ವಿಶ್ವಕಪ್‌ ಅರ್ಧಶತಕಗಳ ಸಾಧನೆಯನ್ನು ಸರಿಗಟ್ಟಿದರು. ಆದರೆ ಈ ಆತಂಕವನ್ನು ದೂರ ಮಾಡುವಲ್ಲಿ ಮೊಹಮ್ಮದ್ ರಿಜ್ವಾನ್ (ಅಜೇಯ 26; 21ಎ, 4X4) ಮತ್ತು ಇಫ್ತಿಕಾರ್ ಅಹಮದ್ (ಔಟಾಗದೆ 17; 15ಎ, 4X2) ಯಶಸ್ವಿಯಾದರು. ಇನಿಂಗ್ಸ್‌ನಲ್ಲಿ 105 ಎಸೆತಗಳು ಬಾಕಿಯಿದ್ದಾಗಲೇ ಪಾಕ್‌ ತಂಡಕ್ಕೆ ಗೆಲುವು ಒಲಿಯಿತು. ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 45.1 ಓವರ್‌ಗಳಲ್ಲಿ 204 (ಲಿಟನ್ ದಾಸ್ 45, ಮೆಹಮುದುಲ್ಲಾ 56, ಶಕೀಬ್ ಅಲ್ ಹಸನ್ 43, ಮೆಹದಿ ಹಸನ್ ಮಿರಾಜ್ 25, ಶಹೀನ್ ಅಫ್ರಿದಿ 23ಕ್ಕೆ3, ಮೊಹಮ್ಮದ್ ವಾಸೀಂ ಜೂನಿಯರ್ 31ಕ್ಕೆ3, ಹ್ಯಾರಿಸ್ ರವೂಫ್ 36ಕ್ಕೆ2) ಪಾಕಿಸ್ತಾನ: 32.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 205 (ಅಬ್ದುಲ್ಲಾ ಶಫೀಕ್ 68, ಫಕಾರ್ ಜಮಾನ್ 81, ಮೊಹಮ್ಮದ್ ರಿಜ್ವಾನ್ ಔಟಾಗದೆ 26, ಇಫ್ರಿಕಾರ್ ಅಹಮದ್ ಔಟಾಗದೆ 17, ಮೆಹದಿ ಹಸನ್ ಮಿರಾಜ್ 60ಕ್ಕೆ3) ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 7 ವಿಕೆಟ್‌ಗಳ ಜಯ ಮತ್ತು 2 ಅಂಕ. 81 @ # 🎉#CWC23 | # ../aIwbrnH3KH #CWC23 💪# 📝: ://./059IGB6Iku ../Pq7IHBuUp4 ಪಾಕ್ ಪರ ಶಹೀನ್ ಆಫ್ರಿದಿ ಮತ್ತು ಮೊಹಮ್ಮದ್‌ ವಸೀಮ್ ತಲಾ 3 ವಿಕೆಟ್ ಪಡೆದರೆ, ಹ್ಯಾರಿಸ್ ರವೂಫ್‌ 2 ಹಾಗೂ ಇಫ್ತಿಕಾರ್ ಅಹಮದ್, ಉಸಾಮ ಮೀರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.