: ವೈಯಕ್ತಿಕ ಕಾರಣ- ಮನೆಗೆ ಮರಳಿದ ಮಾರ್ಷ್ ಅಹಮದಾಬಾದ್: ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ವೈಯಕ್ತಿಕ ಕಾರಣಗಳಿಗಾಗಿ ತಂಡದಿಂದ ಬಿಡುವು ಪಡೆದು ಸ್ವದೇಶಕ್ಕೆ ಮರಳಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್ ಗಾಯಗೊಂಡು ಅಲಭ್ಯರಾಗಿರುವ ಬೆನ್ನಲ್ಲಿಯೇ ಮಾರ್ಷ್ ಗೈರುಹಾಜರಿಯು ತಂಡವನ್ನು ಕಾಡುವ ಸಾಧ್ಯತೆ ಇದೆ. ಮಾರ್ಷ್ ಅವರು ಟೂರ್ನಿಯ ಉಳಿದ ಪಂದ್ಯಗಳಿಗೆ ಲಭ್ಯರಾಗುವ ಕುರಿತ ಯಾವುದೇ ಮಾಹಿತಿಯನ್ನೂ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನೀಡಿಲ್ಲ. ಇದರಿಂದಾಗಿ ಮುಂದಿನ ಪಂದ್ಯಗಳಿಗೆ ಮಾರ್ಷ್ ಬದಲು ಕ್ಯಾಮರಾನ್ ಗ್ರೀನ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ‘ಮಾರ್ಷ್ ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತುರ್ತಾಗಿ ತೆರಳಿದ್ದಾರೆ. ಕುಟುಂಬವೂ ಮುಖ್ಯವಾಗಿರುವುದರಿಂದ ಅವರು ಮಹತ್ವ ನೀಡಿರುವುದು ಸೂಕ್ತವಾಗಿದೆ’ ಎಂದು ತಂಡದ ಆಟಗಾರ ಮಾರ್ಕಸ್ ಸ್ಟೊಯಿನಿಸ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.