: ಬಾಂಗ್ಲಾ ವಿರುದ್ಧ ನೆದರ್ಲೆಂಡ್ಸ್‌ಗೆ 87 ರನ್‌ಗಳ ಗೆಲುವು ಕೋಲ್ಕತ್ತ: ನೆದರ್ಲೆಂಡ್ಸ್‌ ತಂಡವು ತನಗಿಂತಲೂ ಹೆಚ್ಚು ಅನುಭವಿಯಾಗಿರುವ ಬಾಂಗ್ಲಾದೇಶಕ್ಕೆ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಸೋಲಿನ ಕಹಿಯುಣಿಸಿತು. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನಾಯಕ ಸ್ಕಾಟ್ ಎಡ್ವರ್ಡ್‌ (68; 89ಎ, 4X6) ಅರ್ದಶತಕ ಮತ್ತು ಪಾಲ್ ವ್ಯಾನ್ ಮೀಕರನ್ (23ಕ್ಕೆ4) ಅವರ ಉತ್ತಮ ಬೌಲಿಂಗ್ ಬಲದಿಂದ 87 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಡಚ್‌ ಬಳಗವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 50 ಓವರ್‌ಗಳಲ್ಲಿ 229 ರನ್‌ ಗಳಿಸಿ ಆಲೌಟ್ ಆಯಿತು. ಅದಕ್ಕುತ್ತರವಾಗಿ ಬಾಂಗ್ಲಾ ತಂಡಕ್ಕೆ 42.2 ಓವರ್‌ಗಳಲ್ಲಿ 142 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಬಾಂಗ್ಲಾ ತಂಡದ ಬ್ಯಾಟರ್‌ಗಳು ಕಳಪೆ ಆಟವಾಡಿದರು. ಸಾಧಾರಣ ಮೊತ್ತವನ್ನು ಮುಟ್ಟುವಲ್ಲಿ ವಿಫಲರಾದರು. ಬಲಗೈ ವೇಗಿ ಪಾಲ್ ಅವರು ಪ್ರಮುಖ ಬ್ಯಾಟರ್‌ಗಳಾದ ನಜ್ಮುಲ್ ಹುಸೇನ್ ಶಾಂತೊ, ನಾಯಕ ಶಕೀಬ್ ಅಲ್ ಹಸನ್, ಮುಸ್ತಫಿಜುರ್ ರಹೀಮ್ ಮತ್ತು ತಸ್ಕಿನ್ ಅಹಮದ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಬಾಂಗ್ಲಾ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು. ಆರನೇ ಪಂದ್ಯವಾಡಿದ ನೆದರ್ಲೆಂಡ್ಸ್ ತಂಡಕ್ಕೆ ಇದು ಎರಡನೇ ಜಯ. 11 ದಿನಗಳ ಹಿಂದೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಡಚ್ಚರ ಪಡೆ ಮಣಿಸಿತ್ತು. ಬಾಂಗ್ಲಾ ತಂಡಕ್ಕೆ ಇದು ಸತತ ಐದನೇ ಸೋಲು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸುವ ತಂಡದ ಆಸೆ ಕಮರಿತು. ಸಂಕ್ಷಿಪ್ತ ಸ್ಕೋರು ನೆದರ್ಲೆಂಡ್ಸ್: 50 ಓವರ್‌ಗಳಲ್ಲಿ 229 (ವೆಸ್ಲಿ ಬರೆಸಿ 41, ಸ್ಕಾಟ್ ಎಡ್ವರ್ಡ್ಸ್ 68, ಸೈಬ್ರಾಂಡ್ ಎಂಗೆಲ್‌ಬ್ರೆಚ್ಟ್‌ 35, ವ್ಯಾನ್ ಬೀಕ್ ಔಟಾಗದೆ 23, ಶೊರಿಫುಲ್ ಇಸ್ಲಾಂ 51ಕ್ಕೆ2, ತಸ್ಕಿನ್ ಅಹಮದ್ 43ಕ್ಕೆ2, ಮುಸ್ತಫಿಜುರ್ ರೆಹಮಾನ್ 36ಕ್ಕೆ2, ಮೆಹದಿ ಹಸನ್ 40ಕ್ಕೆ2) ಬಾಂಗ್ಲಾದೇಶ: 42.2 ಓವರ್‌ಗಳಲ್ಲಿ 142 (ಮೆಹದಿ ಹಸನ್ 35, ಮಹಮುದುಲ್ಲಾ 20, ಮುಸ್ತಫಿಜುರ್ ರೆಹಮಾನ್ 20, ಪಾಲ್ ವ್ಯಾನ್ ಮಿಕರನ್ 23ಕ್ಕೆ4) #CWC23 🤩# 📝: ://./ ../uwatzb9hdx ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.