: - 279 ರನ್‌ಗಳಿಗೆ ಸರ್ವಪತನ ಕಂಡ ಶ್ರೀಲಂಕಾ ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 279 ರನ್‌ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದೇಶ ಟಾಸ್ ಗೆದ್ದಯ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 49.3 ಓವರ್‌ಗಳಲ್ಲಿ ಶ್ರೀಲಂಕಾ 279 ರನ್ ಗಳಿಸಿತು. ಚರೀತ್ ಅಸಲಂಕಾ ಅವರು ಸ್ಪೋಟಕ ಬ್ಯಾಟಿಂಗ್ ಆಡಿ 105 ಬೌಲ್‌ಗಳಲ್ಲಿ 108 ರನ್ ಗಳಿಸಿದರು. ಸದೀರ್ ಸಮರವಿಕ್ರಮ ಹಾಗೂ ನಿಸಂಕಾ ಅವರು ತಲಾ 41 ರನ್ ಗಳಿಸಿ ಗಮನ ಸೆಳೆದರು. ಉಳಿದ ಬ್ಯಾಟ್ಸ್‌ಮನ್‌ಗಳು ತೀರಾ ಕಡಿಮೆ ರನ್‌ ಗಳಿಸಿ ಔಟಾದರು. ಬಾಂಗ್ಲಾ ಪರ ತಂಜಿಮ್ ಹಸನ್ ಶಾಕೀಬ್ ಅವರು ಮೂರು ವಿಕೆಟ್ ಪಡೆದು ಗಮನ ಸೆಳೆದರು. ಇತ್ತೀಚಿನ ಮಾಹಿತಿ ಪ್ರಕಾರ ಬಾಂಗ್ಲಾ 2 ಓವರ್‌ಗಳಲ್ಲಿ 16 ರನ್ ಗಳಿಸಿ ಆಡುತ್ತಿದೆ. ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯವು ಬಾಂಗ್ಲಾಗಿಂತ ಶ್ರೀಲಂಕಾಕ್ಕೆ ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಲಂಕಾ ತಂಡಕ್ಕೆ ಇನ್ನೆರಡು ಪಂದ್ಯಗಳು ಬಾಕಿಯಿವೆ. ಅವೆರೆಡರಲ್ಲೂ ಜಯ ಸಾಧಿಸಿದರೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಅಣ್ಣ ಅವಕಾಶ ಅದಕ್ಕಿದೆ. ಅದಾಗದಿದ್ದರೂ ಅಂತಿಮ ಏಳು ತಂಡಗಳಲ್ಲಿ ಸ್ಥಾನ ಉಳಿಸಿಕೊಂಡರೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕುಸಾಲ ಮೆಂಡಿಸ್ ಬಳಗ ಇದೆ. ಮ್ಯಾಥ್ಯೂಸ್ ಟೈಮ್ ಔಟ್! ಈ ಪಂದ್ಯದಲ್ಲಿ ಒಂದು ಬಾಲ್ ಕೂಡಾ ಎದುರಿಸದೆ ಬ್ಯಾಟರ್ ಎಂಜೆಲೋ ಮ್ಯಾಥ್ಯೂಸ್ ಟೈಮ್ ಔಟ್ ಆಗಿದ್ದು ವಿಶೇಷವಾಗಿತ್ತು. ನಲ್ಲಿ ಒಂದೂ ಬಾಲ್ ಆಡದೇ ಔಟ್ ಆದ ಕ್ರಿಕೆಟಿಗ ಎಂಬ ದಾಖಲೆಗೆ ಮ್ಯಾಥ್ಯೂಸ್ ಒಳಗಾದರು. ಇದರಿಂದ ಎಂಜೆಲೋ ಮ್ಯಾಥ್ಯೂಸ್ ನಿರಾಶೆಯಿಂದ ಹೊರನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.