ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಅಹಮದಾಬಾದ್ (ಪಿಟಿಐ): ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣಗಳಲ್ಲಿ ವೀಕ್ಷಿಸಿದವರ ಸಂಖ್ಯೆ 10 ಲಕ್ಷ ದಾಟಿದೆ. ಅಹಮದಾಬಾದ್‌ನಲ್ಲಿ ಶುಕ್ರವಾರ ನಡೆದ ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ ವೇಳೆ ಈ ಮೈಲಿಗಲ್ಲು ದಾಖಲಾಗಿದೆ ಎಂದು ಐಸಿಸಿ ತಿಳಿಸಿದೆ. ‘ಪಂದ್ಯಗಳನ್ನು ಕ್ರೀಡಾಂಗಣಕ್ಕೆ ಬಂದು ವೀಕ್ಷಿಸಿದವರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಟಿ.ವಿ ಮತ್ತು ಡಿಜಿಟಲ್‌ ವೇದಿಕೆಯಲ್ಲಿ ವೀಕ್ಷಣೆಯಲ್ಲೂ ಹೊಸ ದಾಖಲೆ ಬರೆದಿದೆ. ಏಕದಿನ ಕ್ರಿಕೆಟ್‌ ಬಗ್ಗೆ ಅಭಿಮಾನಿಗಳು ಹೊಂದಿರುವ ಆಸಕ್ತಿಯನ್ನು ಇದು ತೋರಿಸುತ್ತದೆ’ ಎಂದು ಐಸಿಸಿ ಈವೆಂಟ್ಸ್‌ ವಿಭಾಗದ ಮುಖ್ಯಸ್ಥ ಕ್ರಿಸ್‌ ಟೇಟ್ಲಿ ಹೇಳಿದ್ದಾರೆ. ‘ಸೆಮಿಫೈನಲ್‌ ಮತ್ತು ಫೈನಲ್‌ ಮುಗಿಯುವ ವೇಳೆ ವೀಕ್ಷಣೆಯಲ್ಲಿ ಇನ್ನಷ್ಟು ದಾಖಲೆಗಳು ಮೂಡಿಬರುವ ವಿಶ್ವಾಸವಿದೆ. ಅತ್ಯಧಿಕ ಮಂದಿ ವೀಕ್ಷಿಸಿದ ಐಸಿಸಿ ಟೂರ್ನಿ ಎನಿಸಿಕೊಳ್ಳಲಿದೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.