: ಅಯ್ಯರ್– ರಾಹುಲ್ ಅಬ್ಬರದ ಶತಕ: ನೆದರ್ಲೆಂಡ್ಸ್‌ಗೆ 411 ರನ್ ಗುರಿ ಬೆಂಗಳೂರು: ಇಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್ ವಿರುದ್ಧದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 410 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕ ರೋಹಿತ್(61) ಮತ್ತು ಶುಭಮನ್ ಗಿಲ್ (51)ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 100 ರನ್ ಕಲೆ ಹಾಕಿತು. ಗಿಲ್ ಪತನದ ಬಳಿಕ ಬಂದ ವಿರಾಟ್(51) ಸಹ ಅರ್ಧ ಶತಕ ಸಿಡಿಸಿದರು. ಕೊಹ್ಲಿ ನಿರ್ಗಮನದ ಬಳಿಕ ಶುರುವಾಗಿದ್ದೇ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಆಟ. ಅಬ್ಬರದ ಶತಕ ಸಿಡಿಸಿದ ಅಯ್ಯರ್– ರಾಹುಲ್ ನೆದರ್ಲೆಂಡ್ಸ್ ಬೌಲರ್‌ಗಳನ್ನು ತೀವ್ರವಾಗಿ ದಂಡಿಸಿದ ಶ್ರೇಯಸ್ ಅಯ್ಯರ್, ಕೆ.ಎಲ್‌. ರಾಹುಲ್ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಅಯ್ಯರ್ 94 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 128 ರನ್ ಗಳಿಸಿದರೆ, ರಾಹುಲ್ 64 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 102 ರನ್ ಸಿಡಿಸಿದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಸಂಕ್ಷಿಪ್ತ ಸ್ಕೋರ್:‌ ಶ್ರೇಯಸ್ ಅಯ್ಯರ್: 128 ಕೆ.ಎಲ್. ರಾಹುಲ್: 102 ಬೌಲಿಂಗ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.