: ಆಸೀಸ್‌ಗೆ 307ರನ್‌ಗಳ ಗೆಲುವಿನ ಗುರಿ ನೀಡಿದ ಬಾಂಗ್ಲಾ ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಆಸೀಸ್‌ಗೆ ಗೆಲ್ಲಲು ಬಾಂಗ್ಲಾದೇಶ 307ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ. ಬಾಂಗ್ಲಾದೇಶದ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 306 ರನ್‌ ಪೇರಿಸಿದೆ. ಆಸೀಸ್‌ ಈ ಪಂದ್ಯ ಗೆಲ್ಲಲು 307ರನ್‌ ಗಳಿಸಬೇಕಿದೆ. ' 🔥 - @0xFanCraze ! ://./2yiXAnq84l #CWC23 ../4R6zrYhCEn ನಾಯಕ ನಜ್ಮುಲ್‌ ಹಸನ್‌ ಶಾಂತೊ 45, ತೌಹಿದ್‌ ಹ್ರಿಡೊಯ್‌ 74 ರನ್‌ ಗಳಿಸಿ ಗಮನ ಸೆಳೆದರು. ಆಸೀಸ್‌ ಪರ ಜಂಪಾ ಹಾಗೂ ಸೀನ್ ಅಬಾಟ್ ತಲಾ ಎರಡು ವಿಕೆಟ್‌ ಪಡೆದರು. ಕಳೆದ ಪಂದ್ಯದಲ್ಲಿ ವಿಸ್ಮಯಕಾರಿ ದ್ವಿಶತಕ ಬಾರಿಸಿ ತಂಡವನ್ನು ಪವಾಡಸದೃಶವಾಗಿ ಗೆಲ್ಲಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ ಅವರು ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಬಾಂಗ್ಲಾದೇಶ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದೆ. ಆಸೀಸ್‌ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.