| ವಿಶ್ವಕಪ್ ಫೈನಲ್‌ಗೆ ಭಾರತ; ಸೆಮಿಫೈನಲ್ ಹೈಲೈಟ್ಸ್ ಚಿತ್ರಗಳಲ್ಲಿ ನೋಡಿ ಆತಿಥೇಯ ಭಾರತ ಕ್ರಿಕೆಟ್‌ ತಂಡ ಈ ಬಾರಿಯ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂಬೈನಲ್ಲಿ ನವೆಂಬರ್ 15ರಂದು ನಡೆದ ಪಂದ್ಯದಲ್ಲಿ 70 ರನ್‌ ಅಂತರದ ಜಯ ಸಾಧಿಸುವ ಮೂಲಕ ರೋಹಿತ್‌ ಶರ್ಮಾ ಪಡೆ ಈ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 397 ರನ್‌ ಕಲೆಹಾಕಿತ್ತು. ಈ ಬೃಹತ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, 48.5 ಓವರ್‌ಗಳಲ್ಲಿ 327 ರನ್‌ ಗಳಿಸಿ ಆಲೌಟ್‌ ಆಯಿತು. ಪಂದ್ಯಕ್ಕೂ ಮುನ್ನ ವಿಶ್ವಕಪ್‌ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದ ಸಚಿನ್ ತೆಂಡೂಲ್ಕರ್‌ ಪಿಟಿಐ ಚಿತ್ರ ಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಹಾಗೂ ಇಂಗ್ಲೆಂಡ್‌ನ ಮಾಜಿ ಫುಟ್‌ಬಾಲ್‌ ಆಟಗಾರ ಡೇವಿಡ್‌ ಬೇಕಮ್‌ ಕ್ರೀಡಾಂಗಣದಲ್ಲಿ ಪಿಟಿಐ ಚಿತ್ರ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರೊಂದಿಗೆ ಸಮಾಲೋಚನೆ ನಡೆಸಿದ ಸಚಿನ್ ಹಾಗೂ ಬೇಕಮ್‌ ಪಿಟಿಐ ಚಿತ್ರ ಸೆಮಿಫೈನಲ್‌ಗೂ ಮುನ್ನ ರಾಷ್ಟ್ರಗೀತೆ ಹಾಡಿದ ಉಭಯ ತಂಡಗಳ ಆಟಗಾರರು ಪಿಟಿಐ ಚಿತ್ರ ಟಾಸ್‌ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್‌ ಪಿಟಿಐ ಚಿತ್ರ ಭಾರತಕ್ಕೆ ಬಿರುಸಿನ ಆರಂಭ ನೀಡಿದ ರೋಹಿತ್ ಶರ್ಮಾ ಪಿಟಿಐ ಚಿತ್ರ ಗಾಯಗೊಂಡು ಮೈದಾನ ತೊರೆದ ಶುಭಮನ್ ಗಿಲ್ ಪಿಟಿಐ ಚಿತ್ರ ವಿಶ್ವದಾಖಲೆಯ 50ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಿಟಿಐ ಚಿತ್ರ ಬಿರುಸಿನ ಶತಕ ಗಳಿಸಿದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ ವೈಖರಿ ಪಿಟಿಐ ಚಿತ್ರ ಕೆ.ಎಲ್‌. ರಾಹುಲ್‌ ಅವರು ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟರ್‌ ಡೆವೋನ್ ಕಾನ್ವೆ ಕ್ಯಾಚ್‌ ಪಡೆದಾಗ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ ಪಿಟಿಐ ಚಿತ್ರ ಎದುರಾಳಿ ತಂಡದ ವಿಕೆಟ್‌ ಉರುಳಿದಾಗ ಮೊಹಮ್ಮದ್‌ ಶಮಿಯೊಂದಿಗೆ ರೋಹಿತ್‌ ಸಂಭ್ರಮ ಪಿಟಿಐ ಚಿತ್ರ ಮೂರನೇ ವಿಕೆಟ್‌ಗೆ 181 ರನ್‌ ಸೇರಿಸಿ ಭಾರತಕ್ಕೆ ತಿರುಗೇಟು ನೀಡಿದ ಕೇನ್ ವಿಲಿಯಮ್ಸನ್ ಹಾಗೂ ಡೆರಿಲ್‌ ಮಿಚೇಲ್ ಪಿಟಿಐ ಚಿತ್ರ ಔಟಾಗಿ ನಿರ್ಗಮಿಸಿದ ಕೇನ್ ವಿಲಿಯಮ್ಸನ್ ಪಿಟಿಐ ಚಿತ್ರ ಶತಕ ಸಿಡಿಸಿ ಹೋರಾಟ ನಡೆಸಿದ ಡೆರಿಲ್‌ ಮಿಚೇಲ್ ಪಿಟಿಐ ಚಿತ್ರ ಗಾಯಗೊಂಡ ಡೆರಿಲ್‌ ಮಿಚೇಲ್ ಪಿಟಿಐ ಚಿತ್ರ 7 ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ ಪಿಟಿಐ ಚಿತ್ರ ಪಂದ್ಯ ಗೆದ್ದ ಸಂಭ್ರಮದಲ್ಲಿ ಟೀಂ ಇಂಡಿಯಾ ಪಿಟಿಐ ಚಿತ್ರ ಮುಂಬೈನಲ್ಲಿ ಅಭಿಮಾನಿಗಳ ಸಂಭ್ರಮ ಪಿಟಿಐ ಚಿತ್ರ ಕೋಲ್ಕತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು ಪಿಟಿಐ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.