2ನೇ ಸೆಮಿಫೈನಲ್‌ | ಆಸಿಸ್ ಎದುರು ದ.ಆಫ್ರಿಕಾ ಬ್ಯಾಟಿಂಗ್; ಗೆದ್ದ ತಂಡ ಫೈನಲ್‌ಗೆ ಕೋಲ್ಕತ್ತ: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಟಾಸ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಕೋಲ್ಕತ್ತದ ಈಡನ್‌ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಹಿಂದಿನ ಕೆಲವು ವಿಶ್ವಕಪ್ ಟೂರ್ನಿಗಳಲ್ಲಿ ಲೀಗ್ ಹಂತದಲ್ಲಿ ಅಮೋಘ ಆಟವಾಡಿ, ನಾಲ್ಕು ಬಾರಿ ಸೆಮಿಫೈನಲ್‌ಗಳಲ್ಲಿ ಸೋತು ಹೊರಬಿದ್ದ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್ ಪಟ್ಟ ಬಂದಿದೆ. ಅದನ್ನು ಕಳಚಿಕೊಳ್ಳುವ ಇನ್ನೊಂದು ಅವಕಾಶ ಸಿಕ್ಕಂತಾಗಿದೆ. ಉಭಯ ತಂಡಗಳು ಲೀಗ್ ಹಂತದಲ್ಲಿ ಆಡಿರುವ ಒಂಬತ್ತು ಪಂದ್ಯಗಳ ಪೈಕಿ ತಲಾ ಏಳರಲ್ಲಿ ಜಯಿಸಿವೆ. ಇಲ್ಲಿ ಗೆದ್ದ ತಂಡ ನವೆಂಬರ್‌ 19ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.