ನೀವು ನಿಜವಾಗಿಯೂ 'ದೇವರ ಮಗು': ವಿರಾಟ್ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಹೊಗಳಿಕೆ ಮುಂಬೈ: ನೀವು ನಿಜವಾಗಿಯೂ 'ದೇವರ ಮಗು' ಎಂದು ಪತಿ ವಿರಾಟ್ ಕೊಹ್ಲಿ ಅವರ ಕುರಿತು ಪತ್ನಿ ಅನುಷ್ಕಾ ಶರ್ಮಾ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಮರಣೀಯ ಶತಕ ಗಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕಗಳ ದಾಖಲೆ ಬರೆದಿದ್ದಾರೆ. ಈ ಅವಿಸ್ಮರಣೀಯ ಕ್ಷಣವನ್ನು ಗ್ಯಾಲರಿಯಲ್ಲಿ ಇದ್ದುಕೊಂಡು ಸ್ವತಃ ಅನುಷ್ಕಾ ಶರ್ಮಾ ಕಣ್ತುಂಬಿಕೊಂಡರು. 'ನನಗೆ ನಿಮ್ಮ ಪ್ರೀತಿ ದೊರಕಿಸಿಕೊಟ್ಟ, ನೀವು ಬೆಳೆಯುತ್ತಾ ಹೋಗುವುದನ್ನು ಹಾಗೂ ನಿಮ್ಮ ಎಲ್ಲಾ ಸಾಧನೆಯನ್ನು ನೋಡುವ ಅವಕಾಶ ಕೊಟ್ಟ ಆ ದೇವರಿಗೆ ನಾನು ಋಣಿಯಾಗಿದ್ದೇನೆ. ನಿಮಗೆ ಮತ್ತು ಕ್ರೀಡೆಗೆ ನೀವು ಪ್ರಾಮಾಣಿಕರಾಗಿದ್ದೀರಿ. ನೀವು ನಿಜವಾಗಿಯೂ ದೇವರ ಮಗು' ಎಂದು ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂ ಸ್ಟೋರಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯವನ್ನು ಗೆದ್ದು ಫೈನಲ್‌ಗೆ ತಲುಪಿರುವ ಟೀಮ್ ಇಂಡಿಯಾದ ಆಟಗಾರರನ್ನು ಸಹ ಅನುಷ್ಕಾ ಅಭಿನಂದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.