ಪರಿಹಾರ ವಿಳಂಬ ಸಲ್ಲದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ಪರಿಹಾರ ಕೊಡುವ ವಿಷಯದಲ್ಲಿ ಏರ್ ಇಂಡಿಯಾ ಸಂಸ್ಥೆ ವಿಳಂಬ ಮಾಡುತ್ತಿದೆ. ಅಪಘಾತದಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದರು. ಈ ಪೈಕಿ 58 ಜನರ ಕುಟುಂಬಗಳಿಗೆ ಮಾತ್ರವೇ ಪೂರ್ಣ ಪರಿಹಾರ ಸಿಕ್ಕಿದೆ. ಐದು ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಇನ್ನುಳಿದ ಸಂತ್ರಸ್ತ ಕುಟುಂಬಗಳಿಗೆ ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಗಾಯಾಳುಗಳಿಗೆ ಉದ್ಯೋಗ ಕೊಡುವ ಭರವಸೆಯೂ ಈಡೇರಿಲ್ಲ. ಪರಿಹಾರ ನಿಗದಿ ಮಾಡುವ ಹೊಣೆಯನ್ನು ಮುಂಬೈನ ಮಧ್ಯವರ್ತಿ ಏಜೆನ್ಸಿಯೊಂದಕ್ಕೆ ಒಪ್ಪಿಸಿರುವ ಏರ್ ಇಂಡಿಯಾ ಸಂಸ್ಥೆ ಅಪಘಾತಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಪರಿಹಾರ ಪಡೆಯಲು ಹೋರಾಟ ನಡೆಸುತ್ತಿರುವ ಸಂತ್ರಸ್ತ ಕುಟುಂಬಗಳು ಆರೋಪಿಸಿವೆ. ಮಧ್ಯವರ್ತಿ ಏಜೆನ್ಸಿ ತಕರಾರು ತೆಗೆದು ಪರಿಹಾರ ಮೊತ್ತ ಕಡಿಮೆ ಮಾಡಲು ಚೌಕಾಶಿ ಮಾಡುತ್ತಿವೆ. ಈ ಬೆಳವಣಿಗೆಯಿಂದ ಬೇಸತ್ತಿರುವ ಸಂತ್ರಸ್ತ ಕುಟುಂಬಗಳು ಒಕ್ಕೂಟ ರಚಿಸಿಕೊಂಡು ಅಂತರರಾಷ್ಟ್ರೀಯ ಮಧ್ಯಸ್ತಿಕೆದಾರರ ಮೂಲಕ ಲಂಡನ್‌ನಲ್ಲಿರುವ ವಿಮಾ ಕಂಪೆನಿಯನ್ನು ಸಂಪರ್ಕಿಸಿ ಪರಿಹಾರ ಪಡೆಯಲು ಪ್ರಯತ್ನಿಸಿವೆ. ತಮ್ಮ ಪ್ರಯತ್ನ ವಿಫಲವಾದರೆ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಅತ್ಯಂತ ದುರದೃಷ್ಟಕರ. ಪರಿಹಾರ ಕೊಡುವುದನ್ನು ವಿಳಂಬ ಮಾಡಿದರೆ, ಪರಿಹಾರ ನಿರಾಕರಿಸಿದಂತೆ. ಈ ಬೆಳವಣಿಗೆ ಕೇಂದ್ರ ಸರ್ಕಾರ ಹಾಗೂ ಏರ್ ಇಂಡಿಯಾ ಸಂಸ್ಥೆಗೆ ಗೌರವ ತರುವುದಿಲ್ಲ. ದುರಂತ ಸಂಭವಿಸಿದ ದಿನವೇ ಕೇಂದ್ರ ವಿಮಾನಯಾನ ಸಚಿವರು ಮೃತರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಮಾಂಟ್ರಿಯಲ್ ಅಂತರರಾಷ್ಟ್ರೀಯ ವೈಮಾನಿಕ ಒಪ್ಪಂದದಂತೆ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಮೃತರ ಕುಟುಂಬಗಳಿಗೆ ತಲಾ 75 ಲಕ್ಷ ರೂಗಳಷ್ಟು ಪರಿಹಾರ ಸಿಗಬಹುದು ಎಂದಿದ್ದರು. ಸಚಿವರ ಭರವಸೆಯಂತೆ ಭಾರೀ ಮೊತ್ತದ ಪರಿಹಾರ ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ. ಮೃತನ ವಯಸ್ಸು ಮತ್ತು ಆದಾಯ ಇತ್ಯಾದಿಗಳನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸುವ ವ್ಯವಸ್ಥೆಗೆ ಸಂತ್ರಸ್ತರಿಗೆ ಒಪ್ಪಿಗೆ ಇಲ್ಲ. ಮುಂಬೈನ ಮಧ್ಯವರ್ತಿ ಸಂಸ್ಥೆ ಒಂದೊಂದೇ ಸಂತ್ರಸ್ತ ಕುಟುಂಬವನ್ನು ಕರೆಸಿ ಪರಿಹಾರ ಮೊತ್ತ ನಿಗದಿ ಮಾಡುತ್ತಿದೆ. 22.5 ಲಕ್ಷ ರೂಗಳಿಗಿಂತ ಹೆಚ್ಚಿನ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಈ ವ್ಯವಸ್ಥೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಸಂತ್ರಸ್ತ ಕುಟುಂಬಗಳ ಒಕ್ಕೂಟ ಹೇಳಿದೆ. ಅದೇನೇ ಇರಲಿ ಪರಿಹಾರ ನಿಗದಿ ಮಾಡುವ ಪ್ರಕ್ರಿಯೆ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿರಬೇಕು. ಪರಿಹಾರ ಕೊಡುವ ವಿಷಯದಲ್ಲಿ ಈಗಾಗಲೇ ವಿಳಂಬವಾಗಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಆದಷ್ಟು ಬೇಗ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು. ಹಾಗೇ ಗಾಯಗೊಂಡವರಿಗೆ ನೀಡಿದ್ದ ಭರವಸೆಯಂತೆ ಉದ್ಯೋಗ ಕೊಡಬೇಕು. ಬಜ್ಪೆ ವಿಮಾನ ನಿಲ್ದಾಣದ ಸುರಕ್ಷತೆಗಾಗಿ ಮೂರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ `ರನ್‌ವೇ~ ಸುರಕ್ಷತೆಗಾಗಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.