‌ಶಾ‌ಸ‌ಕರ ಅಸಡ್ಡೆ ಖಂಡ‌ನೀಯ ಈ ವರ್ಷ ಮೂವರು ಸಚಿ‌ವರು ಮತ್ತು ಇತರ 84 ಶಾಸ‌ಕರು, ಕಾಯ್ದೆ ನಿಗದಿ‌ಪ‌ಡಿ‌ಸಿದ ಗಡು‌ವಿ‌ನಲ್ಲಿ ತಮ್ಮ ಆಸ್ತಿ‌ವಿ‌ವ‌ರ‌ಗ‌ಳನ್ನು ಲೋಕಾ‌ಯು‌ಕ್ತಕ್ಕೆ ಸಲ್ಲಿ‌ಸಿಲ್ಲ. ಈ ಪರಿ‌ಪಾಠ ಹೊಸ‌ದಲ್ಲ. ರಾಜ್ಯ‌ದಲ್ಲಿ ಲೋಕಾ‌ಯುಕ್ತ ವ್ಯವ‌ಸ್ಥೆ‌ಯನ್ನು ಅಸ್ತಿ‌ತ್ವಕ್ಕೆ ತಂದ ಮೇಲೆ ಪ್ರತಿ‌ವ‌ರ್ಷವೂ ಬಯ‌ಲಾ‌ಗುವ ಜನ‌ಪ್ರ‌ತಿ‌ನಿ‌ಧಿ‌ಗಳ ಕರ್ತವ್ಯ ಲೋಪ. ಆಸ್ತಿ ವಿವರ ಸಲ್ಲಿ‌ಸ‌ಬೇ‌ಕೆಂಬ ನಿಯ‌ಮ‌ವನ್ನು ಕಾಯ್ದೆ‌ಯಲ್ಲಿ ಅಳ‌ವ‌ಡಿ‌ಸಿದ ಉದ್ದೇಶ ಜನ‌ಪ್ರ‌ತಿ‌ನಿ‌ಧಿ‌ಗಳು ಅಧಿ‌ಕಾರ ದುರು‌ಪ‌ಯೋಗ ಪಡಿ‌ಸಿ‌ಕೊಂಡು ಅಕ್ರಮ ಆಸ್ತಿ‌ಗ‌ಳನ್ನು ಮಾಡಿ‌ಕೊಂ‌ಡಿ‌ದ್ದಾ‌ರೆಯೇ ಎಂಬು‌ದನ್ನು ಗುರು‌ತಿ‌ಸು‌ವುದು. ಒಂದು ವೇಳೆ ಹಿಂದಿನ ವರ್ಷ ಘೋಷಿ‌ಸಿ‌ದ್ದ‌ಕ್ಕಿಂತ ಹೆಚ್ಚಿನ ಆಸ್ತಿ ಗಳಿ‌ಸಿ‌ದ್ದನ್ನು ವರ‌ದಿ‌ಯಲ್ಲಿ ಸಲ್ಲಿ‌ಸಿ‌ದರೆ ಅದನ್ನು ತಕ್ಷ‌ಣವೇ ತನಿ‌ಖೆಗೆ ಒಳ‌ಪ‌ಡಿ‌ಸುವ ಅಧಿ‌ಕಾ‌ರವೂ ಲೋಕಾ‌ಯು‌ಕ್ತಕ್ಕೆ ಇಲ್ಲ. ಶಾಸ‌ಕರು ಸಲ್ಲಿ‌ಸಿದ ವಿವ‌ರ‌ಗಳನ್ನು ಕಲೆ ಹಾಕಿ ಇಟ್ಟು‌ಕೊ‌ಳ್ಳುವ ಇಂಥ ವ್ಯವ‌ಸ್ಥೆ‌ಯೊಂ‌ದ‌ರಿಂ‌ದಲೇ ಭ್ರಷ್ಟ ಮಾರ್ಗ‌ದಿಂದ ಆಸ್ತಿ ಗಳಿ‌ಸುವ ಪ್ರವೃ‌ತ್ತಿಗೆ ಕಡಿ‌ವಾಣ ಹಾಕು‌ವುದು ಸಾಧ್ಯ‌ವಿಲ್ಲ ಎಂಬುದು ಇದು‌ವ‌ರೆ‌ಗಿನ ಅನು‌ಭವ. ತಮ್ಮ ಜನ‌ಸೇ‌ವೆಯ ಕರ್ತ‌ವ್ಯಕ್ಕೆ ಯಾವ ರೀತಿ‌ಯ‌ಲ್ಲಿಯೂ ಅಡ್ಡಿ ಪಡಿ‌ಸದ ಆಸ್ತಿ‌ವಿ‌ವರ ಸಲ್ಲಿ‌ಕೆಯ ನಿಯ‌ಮ‌ವನ್ನು ಪಾಲಿ‌ಸು‌ವು‌ದಕ್ಕೆ ಶಾಸ‌ಕರು ನಿರ್ಲಕ್ಷ್ಯ ತೋರಿ‌ಸು‌ತ್ತಿ‌ರು‌ವುದು ಖಂಡ‌ನೀಯ. ಲೋಕಾ‌ಯುಕ್ತ ಕಾನೂ‌ನನ್ನು ರೂಪಿ‌ಸಿದ ಶಾಸ‌ಕರೇ ಅದನ್ನು ಗೌರ‌ವಿ‌ಸ‌ದಿ‌ದ್ದರೆ ಜನ ಸಾಮಾ‌ನ್ಯರು ಕಾನೂ‌ನು‌ಗ‌ಳನ್ನು ಪಾಲಿ‌ಸ‌ಬೇ‌ಕೆಂದು ಹೇಳುವ ನೈತಿ‌ಕತೆ ಸರ್ಕಾ‌ರಕ್ಕೆ ಉಳಿ‌ಯು‌ತ್ತ‌ದೆಯೇ? ‌ಅ‌ಧಿ‌ಕಾ‌ರಕ್ಕೆ ಬರು‌ವುದೇ ಹಣ ಗಳಿ‌ಸು‌ವು‌ದಕ್ಕೆ ಎಂಬುದು ಈಗ ಎಲ್ಲ ರಾಜ‌ಕೀಯ ಪಕ್ಷ‌ಗಳೂ ಗುಪ್ತ‌ವಾಗಿ ಒಪ್ಪಿ‌ಕೊಂ‌ಡಿ‌ರುವ ರಾಜ‌ಕೀಯ ಸಿದ್ಧಾಂ‌ತ‌ವಾಗಿ ಹೋಗಿದೆ. ಆಸ್ತಿ ಗಳಿ‌ಕೆಯ ಪ್ರಮಾ‌ಣ‌ವನ್ನು ದಾಖ‌ಲಿ‌ಸುವ ಇಂಥ ವ್ಯವ‌ಸ್ಥೆಯ ಬಗ್ಗೆ ಎಲ್ಲ ಪಕ್ಷ‌ಗಳ ಶಾಸ‌ಕ‌ರ‌ಲ್ಲಿಯೂ ಅಸಡ್ಡೆ ಇದೆ ಎಂಬುದು ಈ ನಡ‌ವ‌ಳಿ‌ಕೆ‌ಯಿಂದ ಸ್ಪಷ್ಟ‌ವಾ‌ಗು‌ತ್ತದೆ. ಅಷ್ಟಕ್ಕೂ ಪ್ರತಿ‌ವ‌ರ್ಷದ ಜೂನ್‌ 30ರ ಒಳಗೆ ಆಸ್ತಿ ವಿವರ ಸಲ್ಲಿ‌ಸ‌ದಿ‌ದ್ದರೆ ಲೋಕಾ‌ಯು‌ಕ್ತರು ಇನ್ನೂ ಎರಡು ತಿಂಗಳ ಕಾಲಾ‌ವ‌ಕಾಶ ನೀಡು‌ವು‌ದಕ್ಕೆ ಆಸ್ಪ‌ದ‌ವಿದೆ. ವಿಳಂ‌ಬಕ್ಕೆ ಕಾರಣ ಕೇಳಿ ಶಾಸ‌ಕ‌ರಿಗೆ ನೋಟಿಸ್‌ ನೀಡು‌ವುದು ಮತ್ತು ಈ ಕುರಿತು ರಾಜ್ಯ‌ಪಾ‌ಲ‌ರಿಗೆ ವರದಿ ಸಲ್ಲಿ‌ಸು‌ವು‌ದರ ವಿನಾ ಬೇರೆ ಯಾವುದೇ ಕ್ರಮ‌ವನ್ನು ಆರಂ‌ಭಿ‌ಸುವ ಅಧಿ‌ಕಾರ ಲೋಕಾ‌ಯು‌ಕ್ತ‌ರಿ‌ಗಿಲ್ಲ. ಎರಡು ತಿಂಗಳ ಅವಧಿ ಮೀರಿ‌ದರೂ ವಿವರ ಸಲ್ಲಿ‌ಸದ ಶಾಸ‌ಕರ ವಿರುದ್ಧ ಕ್ರಿಮಿ‌ನಲ್‌ ಮೊಕ‌ದ್ದಮೆ ಹೂಡಲು ಕಾಯ್ದೆ‌ಯಲ್ಲಿ ಕಲ್ಪಿ‌ಸಿದ ಅವ‌ಕಾಶ‌ವನ್ನು ಇದು‌ವ‌ರೆಗೂ ಬಳ‌ಸಿ‌ಕೊಂಡ ನಿದ‌ರ್ಶ‌ನ‌ವಿಲ್ಲ. ಕಾಯ್ದೆಗೆ ಅನು‌ಗು‌ಣ‌ವಾಗಿ ನಡೆ‌ದು‌ಕೊ‌ಳ್ಳ‌ದಿ‌ದ್ದರೆ ಅದಕ್ಕೆ ಬೆಲೆ ತೆರ‌ಬೇ‌ಕಾ‌ಗು‌ತ್ತದೆ ಎಂಬುದು ಜನ‌ಪ್ರ‌ತಿ‌ನಿ‌ಧಿ‌ಗ‌ಳಿಗೆ ಅನು‌ಭ‌ವಕ್ಕೆ ಬರು‌ವಂಥ ಬಿಗಿ ಕಾನೂನು ಬರ‌ಬೇಕು. ಜನ‌ಪ್ರ‌ತಿ‌ನಿ‌ಧಿ‌ಗಳು ಪ್ರಾಮಾ‌ಣಿ‌ಕರೂ, ಭ್ರಷ್ಟಾ‌ಚಾ‌ರಕ್ಕೆ ವಿರೋ‌ಧಿ‌ಗಳೂ ಆದರೆ, ಅಧಿ‌ಕಾ‌ರಿ‌ಗಳು ಅಕ್ರಮ ವ್ಯವ‌ಹಾ‌ರ‌ಗ‌ಳಲ್ಲಿ ತೊಡ‌ಗು‌ವುದು ಸುಲ‌ಭ‌ವಲ್ಲ. ಭ್ರಷ್ಟ ಅಧಿ‌ಕಾ‌ರಿ‌ಗ‌ಳಿಗೆ ಜನ‌ಪ್ರ‌ತಿ‌ನಿ‌ಧಿ‌ಗಳ ಕುಮ್ಮಕ್ಕು ಇದೆ ಎಂದೇ ಲೋಕಾ‌ಯುಕ್ತ ವ್ಯವಸ್ಥೆ ಅಸ್ತಿ‌ತ್ವಕ್ಕೆ ಬಂದಿದೆ. ಶಾಸ‌ಕ‌ರಾ‌ಗಲೀ, ಸಚಿ‌ವ‌ರಾ‌ಗಲೀ ಪ್ರಾಮಾ‌ಣಿ‌ಕ‌ರಿ‌ದ್ದರೆ ಭ್ರಷ್ಟಾ‌ಚಾರ ವಿರೋಧಿ ವ್ಯವ‌ಸ್ಥೆಗೆ ಅಳು‌ಕುವ ಕಾರ‌ಣ‌ವಿಲ್ಲ. ಲೋಕಾ‌ಯು‌ಕ್ತಕ್ಕೆ ಅಸ‌ಹ‌ಕಾರ ನೀಡು‌ವು‌ದ‌ರಿಂದ ಶಾಸ‌ಕರ ಬಗ್ಗೆ ಜನ ಅನು‌ಮಾ‌ನ‌ಪ‌ಡು‌ವಂ‌ತಾ‌ಗಿದೆ. ಜನರ ಪ್ರತಿ‌ನಿ‌ಧಿ‌ಗಳು ಇಂಥ ಸ್ಥಿತಿ‌ಯನ್ನು ತಂದು‌ಕೊ‌ಳ್ಳ‌ಬೇಕೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.