ಪ್ರಜಾವಾಣಿ 50 ವರ್ಷಗಳ ಹಿಂದೆ ಗುರುವಾರ, 31-1-1963 ಬಂದರು ಕಟ್ಟೆ ದೋಣಿನಿರ್ಮಾಣ ಮಂಗಳೂರು, ಜ. 30- ಕಾರವಾರದ ಬಳಿ 1,200 ಅಡಿ ಉದ್ದದ ಬಂದರು ಕಟ್ಟೆ ಹಾಗೂ ದೋಣಿ ನಿರ್ಮಾಣ ಕೇಂದ್ರ, ನಿರ್ಮಿಸಲು ಮೈಸೂರು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಮೀನುಗಾರಿಕೆಯ ಡೈರೆಕ್ಟರ್ ವಿ.ವಿ. ಕಲ್ಯಾಣಿ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು. ಹೆಲಿಕಾಪ್ಟರ್ ತಯಾರಿಕೆ ಬೆಂಗಳೂರು, ಜ. 30- ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟಿಂದೀಚೆಗೆ ಆರ್ಡಿನನ್ಸ್ ಕಾರ್ಖಾನೆಗಳಲ್ಲಿನ ಉತ್ಪನ್ನ ಸಾಮಾನ್ಯವಾಗಿ ಎರಡರಷ್ಟು, ಕೆಲವು ಸಂದರ್ಭಗಳಲ್ಲಿ ಮೂರರಷ್ಟು ಹೆಚ್ಚಿದೆಯೆಂದು ರಕ್ಷಣೆಗೆ ಸಂಬಂಧಿಸಿದ ಉತ್ಪಾದನಾ ಶಾಖೆಯ ಮಂತ್ರಿ ಶ್ರೀ ಕೆ. ರಘುರಾಮಯ್ಯನವರು ಇಂದು ಇಲ್ಲಿ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.