ಟೋಲ್ ಫ್ರೀ ಸಂಖ್ಯೆ ಒದಗಿಸಿ ಅಡುಗೆ ಅನಿಲ ಸಿಲಿಂಡರ್‌ಗಳ ಬುಕ್ಕಿಂಗ್‌ಗೆ ಟೋಲ್ ಫ್ರೀ ದೂರವಾಣಿ ಸಂಖ್ಯೆಯನ್ನು ಒದಗಿಸಲು ಕೇಂದ್ರದ ಪೆಟ್ರೋಲಿಯಂ ಸಚಿವಾಲಯ ಮುಂದಾಗಬೇಕು. ದೇಶದ ನಗರ ಪ್ರದೇಶಗಳ ಬಹುತೇಕ ಎಲ್ಲ ಮನೆಗಳಲ್ಲೂ ಇಂದು ಅಡುಗೆ ಅನಿಲ ಬಳಕೆದಾರರು ಇದ್ದಾರೆ. ಅಡುಗೆ ಅನಿಲದ ಬೇಡಿಕೆ ಹೆಚ್ಚಾದಂತೆಲ್ಲ ಸಿಲಿಂಡರ್ ಪಡೆಯುವುದಕ್ಕಾಗಿ ಅಕ್ರಮ ಮಾರ್ಗಗಳನ್ನು ಹಿಡಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಎಲ್ಲ ಗೊಂದಲದ ನಡುವೆ ಸಿಲಿಂಡರ್ ಬುಕ್ ಮಾಡುವುದೇ ದೊಡ್ಡದೊಂದು ಸಾಹಸದಂತಾಗಿದೆ. ಟೋಲ್‌ಫ್ರೀ ಸಂಖ್ಯೆಯನ್ನು ನೀಡಿದರೆ ಬುಕ್ಕಿಂಗ್ ಗೋಳಿಗೆ ಸ್ವಲ್ಪ ವಿರಾಮ ಸಿಗಬಹುದು. ಜನರಿಗೆ ಉತ್ತಮ ಹಾಗೂ ಪಾರದರ್ಶಕ ಸೇವೆ ನೀಡಬೇಕೆಂಬ ಬಯಕೆ ಇರುವ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಈ ಕುರಿತು ಚಿಂತನೆ ನಡೆಸಬೇಕಾಗಿದೆ. ಅಡುಗೆ ಅನಿಲ ಬಳಕೆದಾರರು ಆಯಾ ತೈಲ ಕಂಪೆನಿಗಳ ಗ್ರಾಹಕರೂ ಹೌದು. ಬುಕ್ಕಿಂಗ್ ಎಂಬ `ಹೆಚ್ಚುವರಿ ಹೊರೆ'ಗೆ ಉಚಿತ ಸೇವೆಯನ್ನು ನೀಡಬೇಕಾದ ಜವಾಬ್ದಾರಿ ಕಂಪೆನಿಗಳಿಗೆ ಇದೆ. ಸಂಬಂಧಪಟ್ಟವರು ಈ ಕುರಿತು ಚಿಂತನೆ ನಡೆಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.