ಶುಕ್ರವಾರ, 30-11-1962 ವಿವಾದ ನಿವಾರಣೆ ಯತ್ನ ನವದೆಹಲಿ, ನ. 29- ಕಾಶ್ಮೀರ ಬಿಕ್ಕಟ್ಟೇ ಮೊದಲಾದ ಭಾರತ-ಪಾಕ್ ನಡುವಣ ಪ್ರಮುಖ ವಿವಾದಗಳನ್ನು ಬಗೆಹರಿಸಿಕೊಳ್ಳಲು ಮತ್ತೆ ಪ್ರಯತ್ನ ನಡೆಯಬೇಕೆಂದು ಪಾಕಿಸ್ತಾನದ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿಯವರು ಒಪ್ಪಿರುವರೆಂದು ಈ ರಾತ್ರಿ ಇಲ್ಲಿ ಹೊರಟ ಭಾರತ-ಪಾಕ್ ಸರ್ಕಾರಗಳ ಜಂಟಿ ಹೇಳಿಕೆ ಶೃತಪಡಿಸಿದೆ. ಡಂಕನ್ ತುರುತು ಭೇಟಿ ನವದೆಹಲಿ, ನ. 29- ಇಂದು ಬೆಳಿಗ್ಗೆ ರಾವಲ್ಪಿಂಡಿಯಿಂದ ಬ್ರಿಟಿಷ್ ಕಾಮನ್‌ವೆಲ್ತ್ ಕಾರ್ಯದರ್ಶಿ ಡಂಕನ್ ಸ್ಯಾಂಡ್ಸ್‌ರವರು ಆತುರವಾಗಿ ಇಲ್ಲಿಗೆ ಆಗಮಿಸಿದರು. ಪ್ರಧಾನಿ ನೆಹರೂರವರನ್ನು ಭೇಟಿ ಮಾಡಿ, ಪಾಕಿಸ್ತಾನದ ಅಧ್ಯಕ್ಷ ಅಯೂಬರೊಡನೆ ನಡೆಸಿದ ಮಾತುಕತೆ ವಿವರಗಳನ್ನು ತಿಳಿಸಿದರೆಂದು ಗೊತ್ತಾಗಿದೆ. ವಚನ ಭಂಗಕ್ಕೆ ಚೀಣ ಸನ್ನಾಹ ನವದೆಹಲಿ, ನ. 29- ಚೀಣ ಯುದ್ಧಸ್ತಂಭನ ಸೂಚನೆ ಪ್ರಕಾರ, ಡಿಸೆಂಬರ್ ಒಂದರಿಂದ ನೀಫಾ ಗಡಿಯಿಂದ ತಮ್ಮ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಷರತ್ತನ್ನು ಪಾಲಿಸದೆ ಇರಲು ಚೀಣ ಸಬೂಬುಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.