ನಿರ್ಲಕ್ಷ್ಯ ಸಲ್ಲ ಅಧಿಕಾರದಲ್ಲಿದ್ದಾಗ ನ್ಯಾಯಾಧೀಶರೊಬ್ಬರ ಬಂಧನಕ್ಕೆ ಆದೇಶಿಸಿದ್ದ­ಕ್ಕಾಗಿ ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಅವರನ್ನು ಭಯೋತ್ಪಾದನೆ ನಿಗ್ರಹ ಕಾನೂನಿನ ಅಡಿ ಬಂಧಿಸಿರುವ ಕ್ರಮ ರಾಜಕೀಯ ಪ್ರೇರಿತ. ನಶೀದ್‌ ಅವರ ಮೇಲೆ ಮೊದಲು ಹೇರಿದ್ದ ಅಧಿಕಾರ ದುರ್ಬಳಕೆ ಆರೋಪವನ್ನು ಕೈಬಿಟ್ಟು, ಭಯೋತ್ಪಾದನೆ ಆರೋಪ ಹೊರಿಸ­ಲಾಗಿದೆ. ಮಾನವ ಹಕ್ಕು ಹೋರಾಟಗಾರರಾದ ನಶೀದ್‌ ಈ ರಾಷ್ಟ್ರದಲ್ಲಿ ದಶಕದ ಹಿಂದೆ ಪ್ರಜಾಪ್ರಭುತ್ವದ ಪರವಾಗಿ ನಡೆದ ಪ್ರಬಲ ಚಳವಳಿಯ ನೇತೃತ್ವ ವಹಿಸಿದ್ದರು. 2007ರಲ್ಲಿ ಸರ್ವಾಧಿಕಾರಿ ಮೌಮೂನ್‌ ಅಬ್ದುಲ್‌ ಗಯೂಮ್‌ ಅವರ ಅಧಿಕಾರ ಪತನಕ್ಕೆ ಕಾರಣರಾಗಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಅಧ್ಯಕ್ಷರಾಗಿದ್ದರು. ಹೀಗಿದ್ದೂ ಗಯೂಮ್‌ ಪಡೆ, ಅವರ ವಿರುದ್ಧ ಸಂಚು ಹೂಡುತ್ತಲೇ ಇತ್ತು. ಕಡೆಗೆ ಪೊಲೀಸ್‌ ಮತ್ತು ಸೇನಾ ದಂಗೆಯಿಂದಾಗಿ 2012ರಲ್ಲಿ ನಶೀದ್‌ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಗಯೂಮ್‌ರ ಮಲಸಹೋದರ ಅಬ್ದುಲ್ಲ ಯಮೀನ್‌ ಅಧಿಕಾರಕ್ಕೆ ಬಂದರು. ಈ ಸರ್ಕಾರ ಒಂದು ವರ್ಷದಿಂದಲೂ ನಶೀದ್‌ ಅವರ ಮಾಲ್ಡೀವಿಯನ್‌ ಡೆಮಾಕ್ರೆಟಿಕ್‌ ಪಕ್ಷದ (ಎಂ.ಡಿ.ಪಿ) ಸದಸ್ಯರನ್ನು ಬಗ್ಗುಬಡಿಯುತ್ತಲೇ ಬಂದಿದೆ. ಆದರೂ ಯಮೀನ್‌ರ ಹಲವು ಮಾಜಿ ಮಿತ್ರಪಕ್ಷಗಳು ಎಂ.ಡಿ.ಪಿ ಜೊತೆ ಕೈಜೋಡಿಸಿವೆ. ಹೀಗೆ ಪ್ರತಿಪಕ್ಷದ ಜನಪ್ರಿಯತೆ ಹೆಚ್ಚತೊಡಗಿ­ದಂತೆಯೇ ಯಮೀನ್‌ ಅಧಿಕಾರದ ಮೇಲಿನ ಹಿಡಿತ ಸಡಿಲವಾಗಲಾ­ರಂಭಿಸಿದ್ದು, ನಶೀದ್‌ ವಿರುದ್ಧದ ರಾಜಕೀಯ ಸೇಡಿಗೆ ಕಾರಣವಾಗಿರಬಹುದು. ನಶೀದ್‌ ಅವರ ವಿಚಾರಣೆ ನ್ಯಾಯಯುತವಾಗಿ ನಡೆಯುವ ಸಾಧ್ಯತೆ ಇಲ್ಲ. ದೇಶದ ನ್ಯಾಯಾಂಗದಲ್ಲಿ ಗಯೂಮ್‌ ಅವರಿಂದ ನೇಮಕಗೊಂಡಿರು­ವವರೇ ತುಂಬಿದ್ದಾರೆ. ರಾಜಕೀಯಪ್ರೇರಿತ ತೀರ್ಪಿನಿಂದ ನಶೀದ್‌ ತಪ್ಪಿತಸ್ಥ ಎನಿಸಿಕೊಳ್ಳಬಹುದು. ಇದು ಯಮೀನ್‌ ತಮ್ಮ ಎದುರಾಳಿಯನ್ನು ನಿವಾರಿಸಿ­ಕೊಂಡು ಅಧಿಕಾರದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗಬಹುದು. ಆದರೆ ಅವರ ಆ ಗೆಲುವು ತಾತ್ಕಾಲಿಕವಾದುದು. ಹೋರಾಟಗಳು ಮತ್ತು ಅಸ್ಥಿರತೆಯು ಕಾಲಕ್ರಮೇಣ ಅವರ ಹಿಡಿತವನ್ನು ಸಡಿಲಿಸುವ ಸಾಧ್ಯತೆಯೇ ಹೆಚ್ಚು. ಭಾರತ ನೆರೆಯ ದೇಶದ ವ್ಯವಹಾರಗಳಿಗೆ ಮುಖ ತಿರುಗಿಸುವುದು ಬಿಟ್ಟು ನಶೀದ್‌ ಅವರನ್ನು ಸರಿಯಾಗಿ ನಡೆಸಿಕೊಳ್ಳುವಂತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾಲ್ಡೀವ್ಸ್‌ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹಿಂದಿನಿಂದಲೂ ಭಾರತದೊಟ್ಟಿಗೆ ಸ್ನೇಹಸಂಬಂಧ ಹೊಂದಿರುವ ಎಂ.ಡಿ.ಪಿ ಮತ್ತು ನಶೀದ್‌, ಮಾಲ್ಡೀವ್ಸ್‌ನ ಚೀನಾ ಪರ ನಿಲುವನ್ನು ವಿರೋಧಿಸುತ್ತಲೇ ಬಂದವರು. ಮಾಲ್ಡೀವ್ಸ್‌ನಲ್ಲಿ ಪ್ರಜಾಸತ್ತೆ ನೆಲೆಸಬೇಕೆಂಬುದು ಭಾರತದ ಹಿಂದೆಂದಿನ ಆಶಯ ಕೂಡ. ಹೀಗಾಗಿ ಸೇಡಿನ ರಾಜಕೀಯಕ್ಕೆ ಆಸ್ಪದ ನೀಡದಂತೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.