ಮುಂಬೈ | ಒಂದೇ ದಿನ ಐವರು ಬಾಲಕಿಯರು ನಾಪತ್ತೆ ಠಾಣೆ: ಬೇರೆ ಬೇರೆ ಕುಟುಂಟಕ್ಕೆ ಸೇರಿದ ಐವರು ಬಾಲಕಿಯರು ಒಂದೇ ದಿನ ನಾಪತ್ತೆಯಾಗಿರುವ ಘಟನೆ ನವಿ ಮುಂಬೈನ ತಲೋಜಾದಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ 14 ಮತ್ತು 16 ವರ್ಷದ ಇಬ್ಬರು ಸಹೋದರಿಯರು ಶಾಲೆಗೆ ತೆರಳಿದ್ದು, ಮನೆಗೆ ವಾಪಸ್ ಬಂದಿಲ್ಲ. ಮತ್ತೊಂದು ಘಟನೆಯಲ್ಲಿ 5, 7 ಮತ್ತು 14 ವರ್ಷದ ಮೂವರು ಸಹೋದರಿಯರು ತಲೋಜಾದಲ್ಲಿರುವ ತಮ್ಮ ಮನೆಯಿಂದಲೇ ಕಾಣೆಯಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಲಕಿಯರಿಗಾಗಿ ಹುಡುಕಾಟ ನಡೆಸಿದ್ದು, ಐಪಿಎಸ್‌ ಸೆಕ್ಷನ್‌ 363(ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.