ಬಿಹಾರ: ಡೆಪ್ಯುಟಿ ಸ್ಪೀಕರ್‌ ಆಗಿ ನರೇಂದ್ರ ನಾರಾಯಣ್ ಯಾದವ್ ಅವಿರೋಧ ಆಯ್ಕೆ ಪಟ್ನಾ: ಬಿಹಾರ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿ ಜೆಡಿಯು ಹಿರಿಯ ನಾಯಕ ನರೇಂದ್ರ ನಾರಾಯಣ್ ಯಾದವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಡೆಪ್ಯುಟಿ ಸ್ಪೀಕರ್‌ ಹುದ್ದೆಗೆ ಆಯ್ಕೆಯಾದ ನಂತರ ನರೇಂದ್ರ ನಾರಾಯಣ್ ಯಾದವ್ ಅವರನ್ನು ಅಭಿನಂದಿಸಿದರು. ಮಹೇಶ್ವರ್‌ ಹಜಾರಿ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನರೇಂದ್ರ ನಾರಾಯಣ್ ಯಾದವ್ ಅವರು 90ರ ದಶಕದಿಂದ ಆಲಮ್‌ನಗರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಅವರು ಸಚಿವರಾಗಿಯೂ ಕೆಲಸ ಮಾಡಿದ್ದರು. ನಂದ ಕಿಶೋರ್ ಯಾದವ್ ಅವರು ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.