ಜೈರಾಮ್‌ ರಾಜ್ಯಸಭೆಯಲ್ಲಿರಲು ಅರ್ಹರಲ್ಲ: ಧನಕರ್ ನವದೆಹಲಿ (ಪಿಟಿಐ): ‘ಜೈರಾಮ್‌ ರಮೇಶ್‌ ಅವರು ರಾಜ್ಯಸಭೆಯಲ್ಲಿರುವುದಕ್ಕೆ ಅರ್ಹರಲ್ಲ’ ಎನ್ನುವ ಮೂಲಕ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್‌ ಅವರು ಕಾಂಗ್ರೆಸ್‌ ನಾಯಕನ ಕಾಲೆಳೆದರು. ಚರಣ್‌ ಸಿಂಗ್‌ ಅವರನ್ನು ‘ಭಾರತ ರತ್ನ’ ಗೌರವಕ್ಕೆ ಆಯ್ಕೆ ಮಾಡಿರುವುದರ ಬಗ್ಗೆ ಮಾತನಾಡಲು ಅವರ ಮೊಮ್ಮಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಸಿಂಗ್‌ ಅವರಿಗೆ ಧನಕರ್‌ ಅವಕಾಶ ನೀಡಿದರು. ಜೈರಾಮ್‌ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಧನಕರ್‌, ‘ಈ ರೀತಿಯ ಅನುಚಿತ ವರ್ತನೆ ತೋರುವ ನಿಮಗೆ ರಾಜ್ಯಸಭೆಯಲ್ಲಿರಲು ಅರ್ಹತೆಯಿಲ್ಲ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.