ತ್ರಿಪುರಾದಲ್ಲಿ ಮೂವರು ಬಾಂಗ್ಲಾ ಮಹಿಳೆಯರ ಬಂಧನ ಅಗರ್ತಲಾ: ಸೂಕ್ತ ದಾಖಲೆಗಳಿಲ್ಲದೆ ಕೋಲ್ಕತ್ತಾಗೆ ತೆರಳುವ ರೈಲು ಹತ್ತಲು ಯತ್ನಿಸಿದ ಮೂವರು ಬಾಂಗ್ಲಾದೇಶದ ಮಹಿಳೆಯರು ಹಾಗೂ ಮೂವರು ಸ್ಥಳೀಯರನ್ನು ಭಾನುವಾರ ಅಗರ್ತಲಾ ರೈಲು ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ವೇಳೆ ಬಾಂಗ್ಲಾ ಮಹಿಳೆಯರ ಬಳಿ ಪಾಸ್‌ಪೋರ್ಟ್‌ ಇರಲಿಲ್ಲ ಎಂದು ಅಗರ್ತಲಾ ಜಿಆರ್‌ಪಿ ಪೊಲೀಸ್ ಠಾಣೆಯ ಅಧಿಕಾರಿ ಒಬೈದುರ್ ರಹಮಾನ್ ಹೇಳಿದ್ದಾರೆ. ಬಾಂಗ್ಲಾದೇಶದ ಮಹಿಳೆಯರನ್ನು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯಡಿ ಬಂಧಿಸಲಾಗಿದೆ. ಜೊತೆಗೆ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ. ಢಾಕಾದಿಂದ ಬಂದ ಈ ಮೂವರು ಬಾಂಗ್ಲಾ ಮಹಿಳೆಯರು ಕೋಲ್ಕತ್ತಾಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.