50 ದಿನಕ್ಕೆ ಕೇಜ್ರಿವಾಲ್ ಹೋಟೆಲ್ ವೆಚ್ಚ ₹1.5 ಕೋಟಿ: ಬಿಜೆಪಿ ವಕ್ತಾರೆ ಶಾಜಿಯಾ ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೊರರಾಜ್ಯಗಳ ದುಬಾರಿ ಹೋಟೆಲ್‌ಗಳಲ್ಲಿ ಕೊಠಡಿ ಕಾಯ್ದಿರಿಸಲು ಸರ್ಕಾರದ ಹಣ ಬಳಸಿದ್ದಾರೆ ಎಂದು ಬಿಜೆಪಿ ವಕ್ತಾರೆ ಶಾಜಿಯಾ ಇಲ್ಮಿ ಆರೋಪಿಸಿದ್ದಾರೆ. ‘ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ರಾಜ್ಯಗಳ ದುಬಾರಿ ಪಂಚತಾರಾ ಹೋಟೆಲ್‌ಗಳಲ್ಲಿ ಕೇಜ್ರಿವಾಲ್ ವಾಸ್ತವ್ಯ ಹೂಡಿದ್ದರು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ‘ಒಂದು ರಾತ್ರಿಗೆ ₹2–3 ಲಕ್ಷ ವೆಚ್ಚದ ಪ್ರೆಸಿಡೆನ್ಶಿಯಲ್, ಮಹಾರಾಜ, ಇಂಪೀರಿಯಲ್ ಕೊಠಡಿಗಳನ್ನು ದೆಹಲಿ ಮುಖ್ಯಮಂತ್ರಿಗಾಗಿ ಕಾಯ್ದಿರಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ. ‘ಕೇಜ್ರಿವಾಲ್ ಅವರ ಹೋಟೆಲ್ ವಾಸ್ತವ್ಯಕ್ಕಾಗಿ 50 ದಿನಕ್ಕೆ ಅಂದಾಜು ಸರಾಸರಿ ₹1.5 ಕೋಟಿ ವೆಚ್ಚ ಮಾಡಲಾಗಿದೆ. ಇದು ದೆಹಲಿಯ ಜನರಿಗೆ ಸೇರಿದ ಹಣ’ ಎಂದು ಅವರು ಆರೋಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.