ಪಾಕ್‌ ಡ್ರೋನ್‌ ಮೇಲೆ ಗುಂಡಿನ ದಾಳಿ ಮೆಂಧರ್‌/ ಜಮ್ಮು : ‘ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋನ್‌ವೊಂದರ ಮೇಲೆ ಭಾರತ ಸೇನೆ ಗುಂಡು ಹಾರಿಸಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು. ‘ಭಾನುವಾರ ತಡರಾತ್ರಿ ಮೆಂಧರ್‌ನ ಮಾನ್‌ಕೋಟೆ ಪ್ರದೇಶದಲ್ಲಿ ಡ್ರೋನ್‌ ಹಾರಾಡುತ್ತಿರುವುದನ್ನು ಎಲ್ಒಸಿಯಲ್ಲಿ ಪಹರೆಯಲ್ಲಿದ್ದ ಸೇನೆ ಗಮನಿಸಿದೆ. ಕೂಡಲೇ ಆ ಡ್ರೋನ್‌ನತ್ತ ಮೂರು ಸುತ್ತಿನ ಗುಂಡು ಹಾರಿಸಿದ್ದು, ಆಗ ಡ್ರೋನ್‌ ಪಾಕಿಸ್ತಾನದ ಕಡೆಗೆ ಮರಳಿದೆ. ಸದ್ಯ ಮಾನ್‌ಕೋಟೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.