ತರಬೇತಿ ವಿಮಾನ ಪಶ್ಚಿಮ ಬಂಗಾಳದಲ್ಲಿ ಪತನ: ಪೈಲಟ್‌ಗಳು ಸುರಕ್ಷಿತ ಕೋಲ್ಕತ್ತ: ಭಾರತೀಯ ವಾಯು ಸೇನೆಯ ತರಬೇತಿ ವಿಮಾನವು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಲೈಕುಂಡ ಬಳಿ ಮಂಗಳವಾರ ಪತನಗೊಂಡಿದೆ. ತರಬೇತಿಯಲ್ಲಿದ್ದ ಪೈಲಟ್‌ಗಳು, ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಪತನಗೊಳ್ಳುವ ಮೊದಲೇ ಪೈಲಟ್‌ಗಳು ಅದರಿಂದ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ. ತರಬೇತಿ ಮುಗಿಸಿ ಕಲೈಕುಂಡ ವಾಯು ನೆಲೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ವಾಯು ನೆಲೆ ಪಕ್ಕದ ಜಾಗದಲ್ಲಿ ವಿಮಾನ ಪತಗೊಂಡಿದೆ. ಇದರ ಮಾಹಿತಿ ಪಡೆದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. | ; : : ://./tX53k3zIFK : ../u2zYsuAEUU ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.