ಲೋಕಸಭೆ ಚುನಾವಣೆ: ರಾಜ್‌ ಠಾಕ್ರೆ ನೇತೃತ್ವದ ಎಂಎನ್ಎಸ್‌–ಬಿಜೆಪಿ ಮೈತ್ರಿ? ಮುಂಬೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಹುಪಕ್ಷಗಳ ಜೊತೆಗೆ ಮೈತ್ರಿ ಹೊಂದುವ ಯತ್ನವಾಗಿ ಬಿಜೆಪಿಯು, ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮುಖಂಡ, ವಾಗ್ಮಿ ರಾಜ್‌ ಠಾಕ್ರೆ ಅವರನ್ನು ಸಂಪರ್ಕಿಸಿದೆ. ರಾಜ್‌ ಠಾಕ್ರೆ ಅವರು ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್‌ ಠಾಕ್ರೆ ಅವರ ದಾಯಾದಿ. ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಆಶೀಶ್ ಶೆಲಾರ್ ಅವರು ರಾಜ್ ಅವರನ್ನು ದಾದರ್‌ನಲ್ಲಿರುವ ಅವರ ನಿವಾಸ ‘ಶಿವತೀರ್ಥ’ದಲ್ಲಿ ಭೇಟಿಯಾಗಿ ಕೆಲಹೊತ್ತು ಚರ್ಚಿಸಿದರು. ಹಿಂದುತ್ವ ಚಿಂತನೆ, ಮರಾಠಿಗರ ಕಲ್ಯಾಣ ಕುರಿತು ಎಂಎನ್ಎಸ್‌ಗೆ ಒಲವು ಇರುವ ಹಿನ್ನೆಲೆಯಲ್ಲಿ ಬಿಜೆಪಿ ಮೈತ್ರಿಗೆ ಮುಂದಾಗಿದೆ ಎನ್ನಲಾಗಿದೆ. ‘ರಾಜಕಾರಣದಲ್ಲಿದ್ದು, ಗೆಳೆಯರೂ ಆಗಿರುವ ಕಾರಣ ಭೇಟಿಯಾದೆವು’ ಎಂದು ಶೆಲಾರ್ ನಂತರ ಪ್ರತಿಕ್ರಿಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.