ಸಿಬಿಐ ಅಧಿಕಾರಿ ಆರ್‌.ಕೆ ಗೌರ್‌ ಸೇವಾ ಅವಧಿ ಮುಕ್ತಾಯ ನವದೆಹಲಿ: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯ ಮಾಹಿತಿ ವಿಭಾಗದ ಬೆನ್ನೆಲುಬಾಗಿದ್ದ ಹಿರಿಯ ಅಧಿಕಾರಿ ಆರ್‌.ಕೆ. ಗೌರ್‌ ಅವರ ಸೇವಾ ಅವಧಿಯು ಮುಕ್ತಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೌರ್‌ ಸಾಬ್‌ ಎಂದೇ ಪ್ರಖ್ಯಾತರಾಗಿದ್ದ ಅವರು 26 ವರ್ಷಗಳ ಕಾಲ ಸೇವೆ ಸಿಬಿಐನಲ್ಲಿ ಸಲ್ಲಿಸಿದ್ದಾರೆ. ಸಿಬಿಐನ ಬಹುತೇಕ ಪತ್ರಿಕಾಗೋಷ್ಠಿಗಳಲ್ಲಿ ಕಾಣಸಿಕೊಳ್ಳುತ್ತಿದ್ದ ಗೌರ್‌ ಅವರು, ಹಲವಾರು ಕಠಿಣ ಸಂದರ್ಭಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಗೌರ್‌ ಅವರು ಪೊಲೀಸ್‌ ಡೆಪ್ಯುಟಿ ಸೂಪರಿಂಟೆಂಡೆಂಟ್‌ ಆಗಿ ಮತ್ತು ಮಾಧ್ಯಮ ಮಾಹಿತಿ ಅಧಿಕಾರಿಯಾಗಿ 2020ರಲ್ಲೇ ನಿವೃತ್ತಿ ಹೊಂದಿದ್ದರು. ಆದರೆ ಸಿಬಿಐ ನಿರ್ದೇಶಕ ರಿಶಿ ಕುಮಾರ್‌ ಶುಕ್ಲ ಅವರ ಮನವಿಯ ಮೇರೆಗೆ ಗುತ್ತಿಗೆ ಆಧಾರದಲ್ಲಿ ಮಾಧ್ಯಮ ವಿಭಾಗದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ‘2024ರ ಜನವರಿಗೆ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಅವರು ಇನ್ನು ಮುಂದೆ ಸಿಬಿಐಗೆ ಸೇವೆ ಸಲ್ಲಿಸುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.