ಅರುಣಾಚಲ, ಮಿಜೋರಾಂ ರಾಜ್ಯ ರಚನಾ ದಿನ: ಪ್ರಧಾನಿ ಮೋದಿ ಶುಭಾಶಯ ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಚನಾ ದಿನದ ಅಂಗವಾಗಿ, ಅಲ್ಲಿನ ಜನರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, 'ಅರುಣಾಚಲ ಪ್ರದೇಶದ ಜನರಿಗೆ ಅವರ ರಾಜ್ಯ ರಚನೆಯಾದದಿನದ ಶುಭಾಶಯಗಳು. ಅರುಣಾಚಲ ಪ್ರದೇಶದ ಜನರು ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಸಂಪ್ರದಾಯ ಹಾಗೂ ಶ್ರೀಮಂತ ಜೀವವೈವಿಧ್ಯತೆ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ವರ್ಷಗಳಲ್ಲೂ ಈ ರಾಜ್ಯದ ಅಭಿವೃದ್ದಿ ಹೀಗೆಯೇ ಮುಂದುವರಿಯಲಿ ಎಂದು ಹೇಳಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಮಿಜೋರಾಂ ಜನರಿಗೆ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮೋದಿ ಪ್ರಾರ್ಥಿಸಿದ್ದಾರೆ. ಮಿಜೋರಾಂನ ವಿಶಿಷ್ಟ ಸಾಂಸ್ಕೃತಿಕ ವಸ್ತ್ರವಿನ್ಯಾಸ, ಸಿರಿವಂತಿಕೆ, ಜನರ ಆತ್ಮೀಯ ಮನೋಭಾವದ ಬಗ್ಗೆ ಭಾರತವು ಬಹಳ ಹೆಮ್ಮೆಪಡುತ್ತದೆ. ಮಿಜೋ ಸಂಸ್ಕೃತಿಯು ಬಹಳ ಸ್ಪೂರ್ತಿದಾಯಕವಾಗಿದೆ. ಮಿಜೋರಾಂನ ನಿರಂತರ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. 1986ರಲ್ಲಿ ಭಾರತದ ಸಂವಿಧಾನಕ್ಕೆ 53ನೇ ತಿದ್ದುಪಡಿ ತರುವುದರೊಂದಿಗೆ 1987ರ ಫೆ.20ರಲ್ಲಿ ಅರುಣಾಚಲ ಪ್ರದೇಶವು ರಾಜ್ಯದ ಸ್ಥಾನಮಾನ ಪಡೆದುಕೊಂಡಿತು. ಅದೇ ದಿನ ಮಿಜೋರಾಂ ರಾಜ್ಯವೂ ರಚನೆಯಾಯಿತು. , . ’ . , … . ' , - . , . … ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.