: ರೈತರ ಹೋರಾಟದ ಕಥೆ ಹೇಳುವ ಚಿತ್ರಗಳು ಇಲ್ಲಿವೆ... ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿಪಡಿಸುವ ಕಾನೂನು ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಹಿಂದೆ ಶೆಲ್‌ ಸಿಡಿದರೂ ಧೃತಿಗೆಡದೆ ನಿಂತ ಹೋರಾಟಗಾರರು, ತಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ಪ್ರಸಾದ ಕೊಟ್ಟು ಹಸಿವು ನೀಗಿಸಿದ ಮಹಿಳೆಯರು, ಕಾಲಿಲ್ಲದಿದ್ದರೂ ಪ್ರತಿಭಟನೆಗೆ ಧುಮುಕಿರುವ ಯುವಕರು, ನೆಲವೇ ಹಾಸಿಗೆ–ಆಗಸವೇ ಚಪ್ಪರ ಎಂಬಂತೆ ರಸ್ತೆಯಲ್ಲೇ ಮಲಗಿದ ರೈತರ ಹೋರಾಟದ ಚಿತ್ರಗಳು ಇಲ್ಲಿವೆ. ಪಂಜಾಬ್‌–ಹರಿಯಾಣ ಗಡಿಯ ಪಟಿಯಾಲ ಜಿಲ್ಲೆಯ ಶಂಭು ಪ್ರದೇಶದಲ್ಲಿ 'ಪಿಟಿಐ' ಸೆರೆಹಿಡಿದ ಈ ಚಿತ್ರಗಳು ಫೆಬ್ರುವರಿ 13ರಂದು ಆರಂಭವಾಗಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯ ಕಥೆ ಹೇಳಬಲ್ಲವು... ತಡೆಬೇಲಿ ಸರಿಪಡಿಸುತ್ತಿರುವ ಭದ್ರತಾ ಸಿಬ್ಬಂದಿ ಪಿಟಿಐ ಚಿತ್ರ ಬಾವುಟ ಸಿಕ್ಕಿಸಿರುವ ಕಡ್ಡಿಗಳನ್ನೇ ಊರುಗೋಲಾಗಿಸಿ ನಡೆದು ಬರುತ್ತಿರುವ ರೈತ ಮಹಿಳೆಯರು ಪಿಟಿಐ ಚಿತ್ರ ಒಂದು ಕಾಲಿಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವೃದ್ಧ ರೈತನೊಂದಿಗೆ ಮಿತ್ರರು ಪಿಟಿಐ ಚಿತ್ರ ಧರಣಿ ಕುಳಿತ ರೈತರು ಪಿಟಿಐ ಚಿತ್ರ ಬಿಗಿ ಭದ್ರತೆ ಪಿಟಿಐ ಚಿತ್ರ ರೈತರ ಹಿಂದೆಯೇ ಸಿಡಿದ ಅಶ್ರುವಾಯು ಶೆಲ್ ಪಿಟಿಐ ಚಿತ್ರ ಪ್ರತಿಭಟನಾನಿರತ ರೈತರನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೂ, ರೈತ ಮಹಿಳೆಯರು ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಪ್ರಸಾದ (ಲಂಗರ್) ವಿತರಿಸಿ, ಹಸಿವು ನೀಗಿಸಿದರು ಪಿಟಿಐ ಚಿತ್ರ ರಸ್ತೆ ಪಕ್ಕದ ಗದ್ದೆಯ ಇಕ್ಕೆಲಗಳಲ್ಲೂ ಭಾರಿ ಭದ್ರತೆ ಪಿಟಿಐ ಚಿತ್ರ ತಡೆಯಲು ಕಾಯುತ್ತಾ 'ನಿಂತ' ಪೊಲೀಸರೆದುರು 'ಕುಳಿತ' ಪ್ರತಿಭಟನಾಕಾರ ಪಿಟಿಐ ಚಿತ್ರ ರೈತರನ್ನು ಬೆಂಬಲಿಸಿ ಪ್ರತಿಭಟನೆಗೆ ಧುಮುಕಿರುವ ಅಂಗವಿಕಲರು ಪಿಟಿಐ ಚಿತ್ರ ತಮ್ಮ ಸಂಘಟನೆಯ ಧ್ವಜ ಹಿಡಿದು ಸೇತುವೆ ಮೇಲೆ ಕುಳಿತ ರೈತರು ಪಿಟಿಐ ಚಿತ್ರ ದಾಹ ತೀರಿಸಿಕೊಳ್ಳಲು ಕಬ್ಬು ಅರೆಯುತ್ತಿರುವುದು ಪಿಟಿಐ ಚಿತ್ರ ಕಾಲು ನೋವು ನಿವಾರಿಸಿಕೊಳ್ಳಲು ಮುಲಾಮು ಹಚ್ಚಿಸಿಕೊಳ್ಳುತ್ತಿರುವ ರೈತ ಪಿಟಿಐ ಚಿತ್ರ ಭೂಮಿಯೇ ಹಾಸಿಗೆ.. ಪಿಟಿಐ ಚಿತ್ರ ವಾಹನಗಳಲ್ಲೇ ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಂಡಿರುವುದು ಪಿಟಿಐ ಚಿತ್ರ ಹಗಲೆಲ್ಲ ಹೋರಾಡಿ, ರಾತ್ರಿ ರಸ್ತೆಗೊರಗಿ ಮಲಗಿದ ರೈತರು ಪಿಟಿಐ ಚಿತ್ರ ಚುರುಗುಟ್ಟುವ ಬಿರು ಬಿಸಿಲಿನಲ್ಲಿ ರಸ್ತೆಯಲ್ಲೇ ಮಲಗಿ ವಿಶ್ರಮಿಸಿದ ರೈತ ಪಿಟಿಐ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.