ಸಂಚಾರ: ‘ವಿಐಪಿ’ ಸೌಲಭ್ಯ ತ್ಯಜಿಸಲು ರಾಜಸ್ಥಾನ ಸಿ.ಎಂ ನಿರ್ಧಾರ ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮ ಅವರು ಸಂಚಾರದ ವೇಳೆ ತಮಗೆ ನೀಡಲಾಗುತ್ತಿರುವ ವಿಐಪಿ ಸೌಲಭ್ಯವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ‘ರೆಡ್‌ ಸಿಗ್ನಲ್‌’ ಇದ್ದಾಗ, ಮುಖ್ಯಮಂತ್ರಿ ಇರುವ ವಾಹನವೂ ನಿಲ್ಲಲಿದೆ. ಅವರು ಕೂಡ ಜನಸಾಮಾನ್ಯರಂತೆಯೇ ಸಂಚರಿಸುವರು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ‘ಮುಖ್ಯಮಂತ್ರಿಗಳಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಯು.ಆರ್‌.ಸಾಹೂ ತಿಳಿಸಿದ್ದಾರೆ. ‘ವಿಐಪಿಗಳ ಸಂಚಾರದ ವೇಳೆ ಜನಸಾಮಾನ್ಯರು ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಎದುರಿಸುತ್ತಿರುವ ತೊಂದರೆಯನ್ನು ಪರಿಗಣಿಸಿ, ಮುಖ್ಯಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.