28 ರೈಲು ನಿಲ್ದಾಣಗಳ ಪುನರ್‌ನಿರ್ಮಾಣಕ್ಕೆ ನಾಳೆ ಅಡಿಗಲ್ಲು ಕೋಲ್ಕತ್ತ: ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ಬಿಹಾರದಲ್ಲಿ ಅಮೃತ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಪುನರ್‌ನಿರ್ಮಾಣಗೊಳ್ಳಲಿರುವ 28 ನಿಲ್ದಾಣಗಳ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 26ರಂದು ಶಿಲಾನ್ಯಾಸ ನೆರವೇರಿಸುವರು ಎಂದು ಪೂರ್ವ ರೈಲ್ವೆಯ ಜನರಲ್ ಮ್ಯಾನೇಜರ್ ಮಿಲಿಂದ್ ಕೆ. ದೇವುಸ್ಕರ್ ಶನಿವಾರ ತಿಳಿಸಿದರು. ಅಂದಾಜು ₹704 ಕೋಟಿ ವೆಚ್ಚದಲ್ಲಿ ಈ 28 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು. ಮೋದಿ ಅವರು ವರ್ಚುವಲ್‌ ಆಗಿ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದೂ ವಿವರಿಸಿದರು. 550 ರೈಲು ನಿಲ್ದಾಣಗಳಲ್ಲಿ ಸೌಲಭ್ಯ ವೃದ್ಧಿಗೊಳಿಸುವ ಯೋಜನೆಯ ಕಾಮಗಾರಿಗೂ ಮೋದಿ ಅವರು ಚಾಲನೆ ನೀಡುವರು ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.