ಲೋಕಸಭಾ ಚುನಾವಣೆ: ತ್ರಿಪುರಾದಲ್ಲಿ 12 ಸಾವಿರ ಅರೆಸೇನಾ ಪಡೆ ನಿಯೋಜನೆ ಅಗರ್ತಲಾ: ತ್ರಿಪುರಾದಲ್ಲಿ ಇದೇ 19ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ 12 ಸಾವಿರ ಕೇಂದ್ರ ಮತ್ತು ರಾಜ್ಯ ಅರೆಸೇನಾಪಡೆಯನ್ನು ನಿಯೋಜಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತ್ರಿಪುರಾದಲ್ಲಿ ಮೊದಲ ಹಂತದ ಚುನಾವಣೆ 19ರಂದು ನಡೆಯಲಿದ್ದು, ಏಪ್ರಿಲ್‌ 26ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಕೇಂದ್ರ ಸಶಸ್ತ್ರ ಪಡೆಯ 84 ತಂಡಗಳು ಹಾಗೂ ಸಿಆರ್‌ಪಿಎಫ್‌ನ 14 ತಂಡಗಳು ಗುರುವಾರ ತ್ರಿಪುರಾಕ್ಕೆ ಆಗಮಿಸಲಿವೆ. ರಾಜ್ಯದಲ್ಲಿ 1,685 ಸ್ಥಳಗಳಲ್ಲಿ ಮತದಾನ ನಡೆಯಲಿದ್ದು, 565 ಕ್ಷೇತ್ರಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.