ಜೈಲಿನಿಂದ ಕೇಜ್ರಿವಾಲ್ ಆದೇಶ: ಪರಿಶೀಲನೆ ನಡೆಸಲಿರುವ ಇ.ಡಿ ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಕೆಲವು ಕಾರ್ಯಗಳಿಗೆ ಜೈಲಿನಿಂದಲೇ ಸೂಚನೆಗಳನ್ನು ರವಾನಿಸಿದ್ದಾರೆ ಎಂದು ಸಚಿವೆ ಆತಿಶಿ ಅವರು ನೀಡಿರುವ ಹೇಳಿಕೆಯನ್ನು ಇ.ಡಿ ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧನದಲ್ಲಿ ಇರುವ ಮುಖ್ಯಮಂತ್ರಿ ನೀಡಿರುವ ಸೂಚನೆಗಳು ಹಣದ ಅಕ್ರಮ ವರ್ಗಾವಣೆ ತಡೆ ಕುರಿತ ವಿಶೇಷ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಇವೆಯೇ ಎಂಬುದನ್ನು ಇ.ಡಿ. ಪರಿಶೀಲಿಸಲಿದೆ ಎಂದು ಗೊತ್ತಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.