ಥಾಣೆ: ಬಟ್ಟೆ ವ್ಯಾಪಾರಿಗೆ ₹1.14 ಕೋಟಿ ವಂಚನೆ ಥಾಣೆ: ಭಿವಂಡಿಯ ಬಟ್ಟೆ ವ್ಯಾಪಾರಿಯೊಬ್ಬರಿಗೆ ಅಹಮದಾಬಾದ್‌ನ ಇಬ್ಬರು ವರ್ತಕರು ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳು ಹಾಗೂ ವ್ಯಾಪಾರಿಯ ನಡುವೆ ಉದ್ಯಮ ಸಂಬಂಧ ಇತ್ತು. ಆಗಾಗ್ಗೆ ಬಾಕಿ ಹಣವನ್ನು ಪಾವತಿಸುತ್ತಿದ್ದರು. ಆದರೆ 2023ರ ಸೆಪ್ಟೆಂಬರ್‌ನಿಂದ ಈವರೆಗೆ ₹1.14 ಕೋಟಿ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಎಫ್‌ಐಆರ್‌ ಉಲ್ಲೇಖಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಹಮದಾಬಾದ್‌ ಮೂಲದ ಭವೇಶ್ ಕೆಸುರ್‌ ಹಾಗೂ ಅಲ್ಪೇಶ್ ಪಟೇಲ್ ಆರೋಪಿಗಳು. ಅವರ ವಿರುದ್ಧ ದೂರು ದಾಖಲಾಗಿದ್ದು, ಇನ್ನೂ ಬಂಧನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.