ಬಿಜೆಡಿ ತೊರೆದ ಪೂರ್ಣಚಂದ್ರ ಸೇಠಿ ಭುವನೇಶ್ವರ: ಒಡಿಶಾದ ಮಾಜಿ ಶಾಸಕ ಪೂರ್ಣಚಂದ್ರ ಸೇಠಿ ಅವರು ಆಡಳಿತಾರೂಢ ಬಿಜು ಜನತಾ ದಳವನ್ನು (ಬಿಜೆಡಿ) ತೊರೆದಿದ್ದಾರೆ. ದಲಿತ ಮುಖಂಡರಾದ ಪೂರ್ಣಚಂದ್ರ ಅವರು ಗಂಜಂ ಜಿಲ್ಲೆಯ ಖಲ್ಲಿಕೋಟ್ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ರಾಜೀನಾಮೆ ಪತ್ರವನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.