ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ– ರಾಹುಲ್‌ ಗಾಂಧಿ ಭರವಸೆ ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಬಹಳಷ್ಟು ಭರವಸೆಗಳನ್ನು ನೀಡುತ್ತುದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೊಸ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ನೀಡುವುದಾಗಿ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಯಾವಾಗ ಸರ್ಕಾರ ಬದಲಾಗುವುದೋ ಆಗ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅಂತಹ ಕೆಲಸ ಮಾಡಲು ಮತ್ತೆಂದೂ ಯಾರೂ ಧೈರ್ಯ ತೋರದಂತೆ ನೋಡಿಕೊಳ್ಳಲಾಗುವುದು, ಇದು ನನ್ನ ಗ್ಯಾರಂಟಿ’ ಎಂದು ಹೇಳಿದ್ದಾರೆ. ‘ಮೂರು ಮಹಿಳೆಯರಲ್ಲಿ ಒಬ್ಬರಷ್ಟೇ ಮಾತ್ರ ಏಕೆ ಉದ್ಯೋಗದಲ್ಲಿದ್ದಾಳೆ? 10ರಲ್ಲಿ ಒಬ್ಬ ಮಹಿಳೆಗಷ್ಟೇ ಏಕೆ ಸರ್ಕಾರಿ ಉದ್ಯೋಗವಿದೆ?, ದೇಶದಲ್ಲಿ ಮಹಿಳಯರ ಜನಸಂಖ್ಯೆ ಶೇ 50ರಷ್ಟು ಇಲ್ಲವೇ?, ಶೇ 50 ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆದಿಲ್ಲವೇ? ಹೌದು ಎಂದಾದರೆ, ಮಹಿಳೆಯರ ಭಾಗವಹಿಸುವಿಕೆ ಇನ್ನೂ ಏಕೆ ಕಡಿಮೆಯಿದೆ’ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ‘ಮಹಿಳೆಯರ ಸಂಖ್ಯೆ ಅರ್ಧದಷ್ಟಿದ್ದರೂ ಅವರಿಗೆ ಪೂರ್ತಿ ಹಕ್ಕು ಇರಬೇಕು ಎಂದು ಕಾಂಗ್ರೆಸ್‌ ಬಯಸುತ್ತದೆ. ಸರ್ಕಾರ ಇರುವ ದೇಶದಲ್ಲಿ ಮಹಿಳೆಯರ ಶ್ರಮವನ್ನು ಸರಿಸಮನಾಗಿ ಬಳಸಿದಲ್ಲಿ ಆ ದೇಶದ ಬೆಳವಣಿಗೆ ಉತ್ತಮವಾಗಲಿದೆ. ಹೀಗಾಗಿ, ಎಲ್ಲಾ ಹೊಸ ಸರ್ಕಾರಿ ಉದ್ಯೋಗದಲ್ಲಿ ಅರ್ಧದಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ’ ಎಂದಿದ್ದಾರೆ. ‘ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ತಕ್ಷಣದ ಅನುಷ್ಠಾನಕ್ಕೆ ನಾವು ಬೆಂಬಲಿಸುತ್ತೇವೆ. ಸುರಕ್ಷಿತ ಆದಾಯ, ಸುರಕ್ಷಿತ ಭವಿಷ್ಯ, ಸ್ಥಿರತೆ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯರು ನಿಜವಾಗಿಯೂ ಸಮಾಜದ ಶಕ್ತಿಯಾಗುತ್ತಾರೆ. 50 ಪ್ರತಿಶತದಷ್ಟು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರು ಇರುವುದು ದೇಶದ ಪ್ರತಿಯೊಬ್ಬ ಮಹಿಳೆಗೆ ಶಕ್ತಿ ನೀಡುತ್ತದೆ ಮತ್ತು ಶಕ್ತಿಯುತ ಮಹಿಳೆಯರು ಭಾರತದ ಭವಿಷ್ಯವನ್ನು ಬದಲಾಯಿಸುತ್ತಾರೆ’ ಎಂದು ರಾಹುಲ್‌ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. आज भी 3 में से सिर्फ 1 महिला के हाथ में रोज़गार क्यों है? 10 सरकारी नौकरियों में से बस 1 पद पर महिला क्यों है? क्या भारत में महिलाओं की आबादी 50% नहीं है? क्या हायर सेकेंडरी और हायर एजुकेशन तक महिलाओं की मौजूदगी 50% नहीं है? अगर है तो फिर सिस्टम में उनकी हिस्सेदारी इतनी कम… जब सरकार बदलेगी तो ‘लोकतंत्र का चीरहरण’ करने वालों पर कार्रवाई ज़रूर होगी! और ऐसी कार्रवाई होगी कि दोबारा फिर किसी की हिम्मत नहीं होगी, ये सब करने की। ये मेरी गारंटी है।# ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.