ಒಡಿಶಾ: ಬಿಜೆಡಿಗೆ ರಾಜೀನಾಮೆ ನೀಡಿದ ಸಂಸದ, ಇಬ್ಬರು ಮಾಜಿ ಶಾಸಕರು ಭುವನೇಶ್ವರ: ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಪಕ್ಷದ ಇಬ್ಬರು ಮಾಜಿ ಶಾಸಕರು ಹಾಗೂ ಹಾಲಿ ಸಂಸದ ಅನುಭವ್ ಮೊಹಂತಿ ರಾಜೀನಾಮೆ ನೀಡಿದ್ದಾರೆ. ನಟ ಮತ್ತು ಸಂಸದ ಅನುಭವ್ ಮೊಹಂತಿ ಅವರು ರಾಜೀನಾಮೆ ನೀಡಿದ್ದು ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿದೆ. ನಟ ಹಾಗೂ ಮಾಜಿ ಶಾಸಕ ಆಕಾಶ್ ದಾಸ್ ನಾಯಕ್, ಮಾಜಿ ಶಾಸಕ ಪ್ರಿಯದರ್ಶಿ ಮಿಶ್ರಾ ಅವರೂ ಕೂಡ ಬಿಜೆಡಿಗೆ ರಾಜೀನಾಮೆ ನೀಡಿದ್ದಾರೆ. ಆಕಾಶ್ ದಾಸ್ ನಾಯಕ್ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಿಯದರ್ಶಿ ಮಿಶ್ರಾ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಡಿಯಿಂದ ಹಲವು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಕೇಸರಿ ಪಕ್ಷದ ಮುಖಂಡರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.