| ಬಿರುಗಾಳಿ ಸಹಿತ ಮಳೆಗೆ ನಲುಗಿದ ಪಶ್ಚಿಮ ಬಂಗಾಳ ಜಲಪೈಗುರಿ ಜಿಲ್ಲೆಯ ರಾಜರ್‌ಹಾಟ್, ಬರ್ನಿಷ್‌, ಬಾಕಲಿ, ಜೋರ್‌ಪಕಡಿ, ಮಾಧಬ್‌ಡಾಂಗಾ, ಸಪ್ತಿಬಾರಿ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ. (ಪಿಟಿಐ ಚಿತ್ರ) ಮಳೆ ಸಂಬಂಧಿತ ಅವಘಡಗಳಲ್ಲಿ ಐವರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. (ಪಿಟಿಐ ಚಿತ್ರ) ಭಾನುವಾರ ತಡರಾತ್ರಿ ಜಲಪೈಗುರಿ ಜಿಲ್ಲೆಗೆ ದೌಡಾಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.‌ (ಪಿಟಿಐ ಚಿತ್ರ) ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. (ಪಿಟಿಐ ಚಿತ್ರ) ಭಾರಿ ಮಳೆ ಹಾಗೂ ಬಿರುಗಾಳಿಗೆ ಮನೆಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿವೆ. (ಪಿಟಿಐ ಚಿತ್ರ) ಬಿರುಗಾಳಿಯಿಂದ ಹಾನಿಗೊಳಗಾದ ಮನೆಗಳು. (ಪಿಟಿಐ ಚಿತ್ರ) ಸಂತ್ರಸ್ತರನ್ನು ಭೇಟಿಯಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. (ಪಿಟಿಐ ಚಿತ್ರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.