ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆ! ಸೇವೆಯಲ್ಲಿ ಭಾರಿ ವ್ಯತ್ಯಯ ನವದೆಹಲಿ: ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಾಗಿದ್ದು ಇದರಿಂದ ಇಂದು ಬೆಳಿಗ್ಗೆ ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಕಳೆದ ಒಂದು ವಾರದಿಂದ ಇದೇ ಕಾರಣದಿಂದ ವಿಸ್ತಾರಾದ 100ಕ್ಕೂ ಹೆಚ್ಚು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಸಿಎದಿಂದ ವರದಿ ಕೇಳಿದೆ. ವಿಸ್ತಾರ ಟಾಟಾ ಗ್ರೂಪ್ ಸೇರಿದ ನಂತರ ಅದರ ಪೈಲಟ್‌ಗಳು ಸಂಬಳ ಸೇರಿದಂತೆ ಇತರೆ ಅನುಕೂಲಗಳಿಗೆ ಆಗ್ರಹಿಸಿ ಅಘೋಷಿತ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕರು ಅನಾರೋಗ್ಯದ ನೆಪ ಒಡ್ಡಿ ಕೆಲಸಕ್ಕೆ ರಜೆ ಹಾಕಿದ್ದಾರೆ. ಇದರಿಂದ ವಿಸ್ತಾರ ಏರ್‌ಲೈನ್ಸ್ ಸೇವೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಸೇವೆಯ ವ್ಯತ್ಯಯದ ಬಗ್ಗೆ ವಿಸ್ತಾರಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ಸಂಸ್ಥೆ 300 ವಿಮಾನಗಳನ್ನು ನಿರ್ವಹಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.