ಕೇಂದ್ರೀಯ ರೈಲ್ವೆಗೆ ಹೆಚ್ಚು ಪ್ರಯಾಣಿಕರ ಹೊತ್ತು ಸಾಗಿದ ಹೆಗ್ಗಳಿಕೆ ಮುಂಬೈ: ಕೇಂದ್ರೀಯ ರೈಲ್ವೆಯು 2023–24ನೇ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿರುವ ಭಾರತೀಯ ರೈಲ್ವೆ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 158.3 ಕೋಟಿ ಪ್ರಯಾಣಿಕರನ್ನು ಅವರ ಗುರಿ ತಲುಪಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 146.5 ಕೋಟಿ ಪ್ರಯಾಣಿಕರನ್ನು ಈ ರೈಲ್ವೆ ವಲಯವು ಗುರಿತಲುಪಿಸಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಶೇ 8ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. 2023–24ರಲ್ಲಿ ₹ 7,311 ಕೋಟಿ ಆದಾಯ ಗಳಿಕೆಯಾಗಿದೆ. ಕಳೆದ ವರ್ಷದ ಆದಾಯವು ₹ 6,414 ಕೋಟಿ. ಕೇಂದ್ರೀಯ ರೈಲ್ವೆಯ ಮುಖ್ಯ ಕಚೇರಿ ಮುಂಬೈನಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.