ಜಾರ್ಖಂಡ್‌: ಮಾವೋವಾದಿ ಬಂಧನ ಮೇದಿನಿನಗರ (ಜಾರ್ಖಂಡ್‌): ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಪ್ರಚೋದಿಸಲು ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಮಾವೋವಾದಿಯೊಬ್ಬರನ್ನು ಇಲ್ಲಿನ ಪಲಾಮು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ‌‘ಮಾವೋವಾದಿಯನ್ನು ಪಂಕಜ್‌ ಪ್ರಜಾಪತಿ (32) ಎಂದು ಗುರುತಿಸಲಾಗಿದೆ. ಈತ ನಕ್ಸಲ್‌ ರಾಜೇಂದ್ರ ಸಿಂಗ್‌ ಸೂಚನೆಯಂತೆ ಚುನಾವಣೆ ಬಹಿಷ್ಕರಿಸಲು ಜನರ ಮನವೊಲಿಸಲು ಸಿದ್ಧತೆ ನಡೆಸುತ್ತಿದ್ದ. ಗುಪ್ತಚರ ದಳದ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್‌ ತಿಳಿಸಿದ್ದಾರೆ. ಈತನ ನಿವಾಸದ ಮೇಲೆ ದಾಳಿ ನಡೆಸಿದಾಗ ಆರೋಪಕ್ಕೆ ಸಂಬಂಧಿಸಿದ ಬ್ಯಾನರ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.