ದೆಹಲಿ: ಚಲಿಸುತ್ತಿದ್ದ ಮೆಟ್ರೊಗೆ ಸಿಲುಕಿ ವ್ಯಕ್ತಿ ಸಾವು ನವದೆಹಲಿ: ದೆಹಲಿಯ ಹಳದಿ ಮಾರ್ಗದಲ್ಲಿ ಚಲಿಸುತ್ತಿದ್ದ ಮೆಟ್ರೊ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಉದ್ಯೋಗ ಭವನ ಮೆಟ್ರೊ ನಿಲ್ದಾಣದಲ್ಲಿ ಘಟನೆ ನಡೆದಿದ್ದು, 20 ನಿಮಿಷ ಮೆಟ್ರೊ ಸೇವೆಯಲ್ಲಿ ವ್ಯತ್ಯಯವಾಗಿದೆ. ಮೃತ ವ್ಯಕ್ತಿಯ ಜೇಬಿನಲ್ಲಿ ಚೀಟಿಯೊಂದು ದೊರಕಿದ್ದು, ಅದರಲ್ಲಿ ಮೊಬೈಲ್‌ ನಂಬರ್‌ ಇದೆ, ಅದನ್ನಾಧರಿಸಿ ವ್ಯಕ್ತಿಯ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಡಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರ್‌ಗಾಂವ್‌ನ ಮಿಲೇನಿಯಂ ಸಿಟಿ ಸೆಂಟರ್‌ನಿಂದ ಸಮಯಾಪುರ ಬಡ್ಲಿ ನಿಲ್ದಾಣದವರೆಗೆ ಹಳದಿ ಮಾರ್ಗದ ಮೆಟ್ರೊ ಸಂಚರಿಸಲಿದೆ. ಇದರ ನಡುವೆ ಇರುವ ಉದ್ಯೋಗ ಭವನ ಮೆಟ್ರೊ ನಿಲ್ದಾಣದಿಂದ ಬೆಳಿಗ್ಗೆ 11.30ರ ಹೊತ್ತಿಗೆ ರೈಲು ತೆರಳುವ ವೇಳೆ ಘಟನೆ ನಡೆದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.