ಅನಂತ್- ರಾಧಿಕಾ ವಿವಾಹ: ವಿಶ್ವಂಭರಿ ಸ್ತುತಿಗೆ ಅದ್ಭುತ ನೃತ್ಯ ಮಾಡಿದ ನೀತಾ ಅಂಬಾನಿ ಜಾಮ್ ನಗರ: ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಸ್ವತಃ ನೀತಾ ಅಂಬಾನಿ ಸಂಗಡಿಗರ ಜೊತೆ ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಸಂಭ್ರಮಿಸಿದ್ದಾರೆ. ವಿಶ್ವಂಭರಿ ಸ್ತುತಿಗೆ ನೀತಾ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿದ್ದಾರೆ. ಅನಂತ್- ರಾಧಿಕಾ ವಿವಾಹ: ವಿಶ್ವಂಭರಿ ಸ್ತುತಿಗೆ ಅದ್ಭುತ ನೃತ್ಯ ಮಾಡಿದ ನೀತಾ ಅಂಬಾನಿ# # ../ ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವೀ ಪತ್ನಿ ರಾಧಿಕಾ ಮರ್ಚೆಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗುತ್ತದೆ. ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಭಾರತೀಯ ಸಂಪ್ರದಾಯದಂತೆಯೇ ಮಾಡಲಾಗುತ್ತಿದೆ. ದೇಶ- ವಿದೇಶಗಳಿಂದ ವಿಶೇಷವಾದ ಅತಿಥಿಗಳು ಬರುತ್ತಿದ್ದಾರೆ. ಸ್ಥಳೀಯ ಕಲಾವಿದರು ಅದ್ಭುತವಾಗಿ ಜಾಮ್ ನಗರದಲ್ಲಿ ಮದುವೆ ಪೂರ್ವ ಕಾರ್ಯಕ್ರಮ ನಡೆಯುವ ಸ್ಥಳವನ್ನು ಸಿದ್ಧಗೊಳಿಸಿದ್ದಾರೆ. ಅಂಬಾನಿ ಕುಟುಂಬದ ಸದಸ್ಯರೇ ಸ್ವತಃ ಸ್ಥಳೀಯರಿಗೆ ಅನ್ನ ಸಂತರ್ಪಣೆಯನ್ನು ಮಾಡಿದ್ದಾರೆ. ಇದೀಗ, ನೀತಾ ಅಂಬಾನಿ ಮತ್ತು ಅವರ ಜತೆಗೆ ದೊಡ್ಡ ತಂಡವೊಂದು ಸುಂದರವಾದ ವೇದಿಕೆ ಮೇಲೆ ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡುತ್ತಾ, ತಾಯಿ ಭಗವತಿ ಹಾಗೂ ಸ್ತ್ರೀ ಶಕ್ತಿಯ ಅದ್ಭುತವನ್ನು ತಿಳಿಸುವಂಥ ಪ್ರದರ್ಶನವನ್ನು ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.