ಫೋಟೊಗ್ರಾಫರ್ ಅಂಕಿತ್ ಸಕ್ಸೇನಾ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ ನವದೆಹಲಿ: ಅನ್ಯ ಧರ್ಮೀಯ ಯುವತಿಯೊಂದಿಗಿನ ಸ್ನೇಹದ ವಿಚಾರಕ್ಕೆ ಸಂಬಂಧಿಸಿದಂತೆ 2018ರ ಫೆಬ್ರುವರಿಯಲ್ಲಿ ಹಾಡ ಹಗಲೇ ನಡೆದಿದ್ದ ಫೋಟೊಗ್ರಾಫರ್ ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಇಲ್ಲಿನ ಸ್ಥಳೀಯ ನ್ಯಾಯಾಲಯವು, ಅಪರಾಧಿಗಳಿಗೆ ತಲಾ ₹50,000 ದಂಡ ವಿಧಿಸಿದೆ. ಸರ್ಕಾರಿ ವಕೀಲರಾದ ವಿಶಾಲ್ ಗೋಸೇನ್ಮತ್ತು ರೆಬೆಕ್ಕಾ ಮಮ್ಮೆನ್ ಜಾನ್ ಪ್ರಾಸಿಕ್ಯೂಷನ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಕ್ಸೇನಾ ಪ್ರೇಯಸಿ ಶೆಹಜಾದಿ ಪೋಷಕರಾದ ಅಕ್ಬರ್ ಅಲಿ ಮತ್ತು ಶಹನಾಜ್ ಬೇಗಂ, ಸೋದರಮಾವ ಮೊಹಮ್ಮದ್ ಸಲಿಂ ಅವರನ್ನು ತಪ್ಪಿತಸ್ಥರೆಂದು ಕಳೆದ ವರ್ಷ ಡಿಸೆಂಬರ್‌ 23ರಂದು ಕೋರ್ಟ್ ತೀರ್ಪು ನೀಡಿತ್ತು. ಶೆಹಜಾದಿ ಜೊತೆ ಅಂಕಿತ್ ಸಂಬಂಧವನ್ನು ವಿರೋಧಿಸಿದ್ದ ಪೋಷಕರು, ಅಂಕಿತ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದರು. ತೀರ್ಪಿನ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.