ಶಿವರಾತ್ರಿ ಪ್ರಯುಕ್ತ ಸಂಗಮದಲ್ಲಿ 9 ಲಕ್ಷಕ್ಕೂ ಅಧಿಕ ಜನರಿಂದ ಪುಣ್ಯ ಸ್ನಾನ ಪ್ರಯಾಗರಾಜ್, ಉತ್ತರಪ್ರದೇಶ: ಮಹಾ ಶಿವರಾತ್ರಿ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಪವಿತ್ರ ಗಂಗಾ ಸಂಗಮದಲ್ಲಿ ಶುಕ್ರವಾರ ಸುಮಾರು 9.70 ಲಕ್ಷಕ್ಕೂ ಅಧಿಕ ಜನ ಪುಣ್ಯ ಸ್ನಾನ ಮಾಡಿದರು. ಸಂಗಮದ ಮಾಘ ಮೇಳದ ಉಸ್ತುವಾರಿ ಅಧಿಕಾರಿಗಳು ಈ ಮಾಹಿತಿ ತಿಳಿಸಿದ್ದಾರೆ. ಸದ್ಯ ಸಂಗಮದಲ್ಲಿ ಮಾಘ ಮೇಳ ನಡೆಯುತ್ತಿದ್ದು ಶಿವರಾತ್ರಿ ದಿನ ಬೆಳಿಗ್ಗೆ 6.30ರಿಂದ ಸಂಜೆ 10 ಗಂಟೆಯವರೆಗೆ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಈ ಸಾರಿ ಪುಣ್ಯ ಸ್ನಾನದ ಘಾಟ್‌ಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.