ಹಿಮಾಚಲ ಪ್ರದೇಶ: ಪಕ್ಷೇತರ ಶಾಸಕನ ವಿರುದ್ಧ ಪ್ರಕರಣ ದಾಖಲು ಶಿಮ್ಲಾ: ಹಿಮಾಚಲ ಪ್ರದೇಶದ ಪಕ್ಷೇತರ ಶಾಸಕ ಮತ್ತು ಕಾಂಗ್ರೆಸ್‌ನ ಅನರ್ಹ ಶಾಸಕರೊಬ್ಬರ ತಂದೆಯ ವಿರುದ್ಧ ರಾಜ್ಯ ಪೊಲೀಸರು ‘ಚುನಾವಣಾ ಅಪರಾಧ’ಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಈಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕಾಂಗ್ರೆಸ್‌ ಶಾಸಕರಾದ ಸಂಜಯ್‌ ಅವಸ್ಥಿ ಮತ್ತು ಭುವನೇಶ್ವರ ಗೌರ್‌ ಅವರು ನೀಡಿದ್ದ ದೂರಿನ ಆಧಾರದಲ್ಲಿ ಪಕ್ಷೇತರ ಶಾಸಕ ಆಶಿಶ್‌ ಶರ್ಮಾ ಮತ್ತು ಅನರ್ಹ ಶಾಸಕ ಚೈತನ್ಯ ಶರ್ಮ ಅವರ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.