ರಿಷಿಕೇಶ: ಎರಡು ವರ್ಷಗಳ ಹಿಂದೆ ಸೆರೆಹಿಡಿಯಲಾಗಿದ್ದ ನರಭಕ್ಷಕ ಹುಲಿ ಸಾವು ರಿಷಿಕೇಶ (ಉತ್ತರಾಖಂಡ): 2022ರ ಜುಲೈನಲ್ಲಿ ಸೆರೆಹಿಡಿದಿದ್ದ ನರಭಕ್ಷಕ ಹೆಣ್ಣು ಹುಲಿಯು ಇಲ್ಲಿನ ಕಾರ್ಬೆಟ್‌ ಹುಲಿ ರಕ್ಷಿತಾರಣ್ಯದ ಸಂರಕ್ಷಣಾ ಕೇಂದ್ರದಲ್ಲಿ ಮೃತಪಟ್ಟಿದೆ. 11 ವರ್ಷ ವಯಸ್ಸಿನ ಹುಲಿಯು ಶನಿವಾರ ರಾತ್ರಿ ವಯೋಸಹಜವಾಗಿ ಕೊನೆಯುಸಿರೆಳೆದಿದೆ ಎಂದು ರಕ್ಷಿತಾರಣ್ಯದ ಉಪ ನಿರ್ದೇಶಕ ದಿಗಂತ್‌ ನಾಯಕ್‌ ತಿಳಿಸಿದರು. ಪನೋದ್‌ ನಾಲಾ ಪ್ರದೇಶದಲ್ಲಿ ಈ ಹುಲಿಯು ಬೈಕರ್‌ಗಳು ಸೇರಿದಂತೆ ಹಲವರನ್ನು ಕೊಂದಿತ್ತು. ಬಳಿಕ ಇದನ್ನು ನರಭಕ್ಷಕ ಹುಲಿ ಎಂದು ಘೋಷಿಸಲಾಗಿತ್ತು ಎಂದು ಅವರು ವಿವರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.