ಪಶ್ಚಿಮ ಬಂಗಾಳ: ಮತ್ತೆ 4 ದಿನ ಸಿಬಿಐ ವಶಕ್ಕೆ ಶಹಜಹಾನ್‌ ಶೇಖ್ ಬಸೀರ್‌ಹಾಟ್, ಪಶ್ಚಿಮ ಬಂಗಾಳ: ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ನಡೆದಿದ್ದ ದಾಳಿ ಪ್ರಕರಣದ ಸಂಬಂಧ ಶಹಜಹಾನ್‌ ಶೇಖ್ ಅವರನ್ನು ಇನ್ನೂ ನಾಲ್ಕು ದಿನಗಳ ಅವಧಿಗೆ ಸಿಬಿಐನ ವಶಕ್ಕೆ ಕೋರ್ಸ್‌ ಒಪ್ಪಿಸಿದೆ. ಬಂಧನದ ಅವಧಿ ಮುಗಿದಿದ್ದ ಕಾರಣ ಶಹಜಹಾನ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದ ಸಿಬಿಐ, ಇನ್ನಷ್ಟು ದಿನಗಳು ವಶಕ್ಕೆ ಒಪ್ಪಿಸುವಂತೆ ಕೋರಿತ್ತು. ಈ ಮುನ್ನ ವಿಚಾರಣೆಗಾಗಿ ಮಾರ್ಚ್‌ 6ರಂದು ಸಿಬಿಐ ತನ್ನ ವಶಕ್ಕೆ ಆರೋಪಿಯನ್ನು ಪಡೆದುಕೊಂಡಿತ್ತು. ಉತ್ತರ 24 ಪರಗಣ ಜಿಲ್ಲೆಯ ಬಸೀರ್‌ಹಾಟ್‌ ಕೋರ್ಟ್‌ನ ನ್ಯಾಯಾಧೀಶರು ಆರೋಪಿಯನ್ನು ಮತ್ತೆ 4 ದಿನದ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸಿದರು. ಮಾರ್ಚ್‌ 14ರಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸುವಂತೆಯೂ ಸೂಚಿಸಿದರು. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೂ ಆದ ಶಹಜಹಾನ್‌ ಶೇಖ್‌ ಅವರಿಗೆ ಸೇರಿದ್ದ ಸ್ಥಳದ ಪರಿಶೀಲನೆಗೆ ಹೋಗಿದ್ದ ಇ.ಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.