ಒಡಿಶಾ ಸರ್ಕಾರದ ಮಹಿಳಾ ನೌಕರರ ಸಿಎಲ್‌ 25ಕ್ಕೆ ಏರಿಕೆ ಭುವನೇಶ್ವರ: ಒಡಿಶಾ ಸರ್ಕಾರದ ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿಗೆ ವಾರ್ಷಿಕ ಸಾಂದರ್ಭಿಕ ರಜೆಗಳ (ಸಿಎಲ್‌) ಸಂಖ್ಯೆಯನ್ನು 25ಕ್ಕೆ ಏರಿಸಿರುವುದಾಗಿ ಅಲ್ಲಿಯ ಸರ್ಕಾರ ಮಂಗಳವಾರ ಘೋಷಿಸಿದೆ. ಮಹಿಳೆಯರಿಗಿರುವ ಕುಟುಂಬ ನಿರ್ವಹಣೆ ಜವಾಬ್ದಾರಿ ಮತ್ತಿತರ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಅವರಿಗೆ 10 ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ನೀಡುವ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ. ಈಚೆಗಷ್ಟೇ, ಸರ್ಕಾರೇತರ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ವಾರ್ಷಿಕ 15 ದಿನಗಳು ಸಾಂದರ್ಭಿಕ ರಜೆ ನೀಡುವುದಾಗಿ ಒಡಿಶಾ ಸರ್ಕಾರವು ಘೋಷಿಸಿತ್ತು. ಶಿಕ್ಷಣ ಸಂಸ್ಥೆಗಳ ಮಹಿಳಾ ಸಿಬ್ಬಂದಿ (ಬೋಧಕ ಮತ್ತು ಬೋಧಕೇತರ) 180 ದಿನಗಳ ಮಾತೃತ್ವ ರಜೆ ನೀಡುವುದಾಗಿ ಘೋಷಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.